ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋ ಚಾಲಕರ ಡೆಡ್ಲಿ ರೇಸಿಂಗ್ ವಿಡಿಯೋ ಸ್ಥಳಿಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಆಟೋ ಚಾಲಕರ ಈ ಹುಚ್ಚಾಟಕ್ಕೆ ಇತರೆ ವಾಹನ ಸವಾರರು ಒಂದು ಕ್ಷಣ ಶಾಕ್ ಆಗಿದ್ದಾರೆ.
Home Interior Tips: ಪಾತ್ರೆ ಎಷ್ಟೇ ಉಜ್ಜಿದ್ರೂ ಸೀದು ಹೋದ ಕಲೆ ಹೋಗ್ತಿಲ್ವಾ? ಡೋಂಟ್ವರಿ ಹೀಗೆ ಮಾಡಿ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನ ಸವಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿರುತ್ತೆ. ಅದೇ ರೀತಿ ನಿನ್ನೆ ವಾಹನಗಳ ಸಂಚಾರ ಹೆಚ್ಚಾಗಿರುವಾಗಲೆ ಏರ್ಪೋಟ್ ರಸ್ತೆಗಿಳಿದ ಇಬ್ಬರು ಆಟೋ ಚಾಲಕರು ಅಕ್ಷರಶಃ ಹುಚ್ಚಾಟ ಮೆರೆದಿದ್ದಾರೆ. ಅಂದಹಾಗೆ ಏರ್ಪೋಟ್ ರಸ್ತೆಯ ಹುಣಸಮಾರನಹಳ್ಳಿಯ ಏರ್ ಪೋರ್ಸ್ ಬಳಿ ಹೆದ್ದಾರಿಗೆ ಬಂದ ಇಬ್ಬರು ಚಾಲಕರು ಸುಮಾರು ಐದರಿಂದ ಆರು ಕಿಲೋ ಮೀಟರ್ ನಷ್ಟು ದೂರ ಆಟೋ ರೇಸ್ ಮಾಡಿದ್ದಾರೆ.
ಏರ್ಪೋಟ್ನಿಂದ ಸಾದಹಳ್ಳಿ ಗೇಟ್ನ ಸಿಗ್ನಲ್ವರೆಗೂ ನಾ ಮುಂದು ತಾ ಮುಂದು ಅಂತ ಜೀವ ಭಯವೆ ಯಿಲ್ಲದೆ ಒಬ್ಬರಿಗೊಬ್ಬರು ಹೆದ್ದಾರಿಯಲ್ಲಿ ರೇಸ್ ಮಾಡಿದ್ದು ಆಟೋ ಚಾಲಕರ ರೇಸ್ನ ವಿಡಿಯೋವನ್ನ ಕಾರು ಚಾಲಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನೂ ಮೊಬೈಲ್ನಲ್ಲಿ ಸೆರೆ ಸಿಕ್ಕ ದೃಶ್ಯದಲ್ಲಿ ಆಟೋ ನಂಬರ್ ಅನ್ನ ಚೆಕ್ ಮಾಡಿದ ಚಿಕ್ಕಜಾಲ ಪೊಲೀಸರಿಗೆ ಅದು ನಖಲಿ ನಂಬರ್ ಪ್ಲೇಟ್ ಎನ್ನುವುದು ಗೊತ್ತಾಗಿದ್ದು ಹೆದ್ದಾರಿಯಲ್ಲಿ ಕ್ಯಾಮರಾಗಳ ಮೂಲಕ ಆಟೋಗಳ ಪತ್ತೆಗೆ ಮುಂದಾಗಿದ್ದಾರೆ.