ಇತ್ತೀಚಿನ ದಿನಗಳಲ್ಲಿ ಹಲವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸಣ್ಣ ಆಗ್ಬೇಕು ಅಂತ ವಾಕಿಂಗ್, ಜಿಮ್,ಡಯೆಟ್ ಏನೇನೋ ಪ್ರಯತ್ನ ಮಾಡುತ್ತಾರೆ. ಆದರೆ ಇದೀಗ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ವಾಕಿಂಗ್ಗೆ ಹೋಗೋಕೆ ಆಗ್ತಿಲ್ವಾ? ಹಾಗಿದ್ರೆ ನಾವು ಹೇಳುವ ಈ ಟಿಪ್ಸ್ ಅನ್ನು ಮನೆಯಲ್ಲೇ ಮಾಡಿ ಸ್ಲಿಮ್ ಆಗ್ತೀರಾ..
ರಾಜ್ಯದಲ್ಲಿ ಇನ್ನೂ 6 ದಿನ ಮಳೆಯ ಆರ್ಭಟ: ಎಲ್ಲಾ ಜಿಲ್ಲೆಗಳಿಗೂ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್
ಹೌದು, ಅಡುಗೆ ಮನೆಯಲ್ಲೇ ಸಿಗುವ ಚಿಯಾ ಬೀಜಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು, ತೂಕ ಇಳಿಕೆಗೆ ತುಂಬಾ ಸಹಕಾರಿ ಆಗಿದೆ. ಚಿಯಾ ಬೀಜಗಳು ಖನಿಜಗಳು, ಒಮೆಗಾ -3 ಕೊಬ್ಬು, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫೈಬರ್ಗಳನ್ನು ಹೊಂದಿದ್ದು, ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಬಲವಾದ ಮೂಳೆಗಳನ್ನು ಬೆಂಬಲಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ. ಇಂತಹ ಚಿಯಾ ಬೀಜಗಳನ್ನು ಅರಿಶಿನ ನೀರಿನಲ್ಲಿ ಬೆರೆಸಿ ಕುಡಿದರೆ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು. ಜೊತೆಗೆ ಹಸಿವನ್ನು ಸಹ ಕಡಿಮೆ ಮಾಡುತ್ತದೆ. ಚಿಯಾ ಬೀಜಗಳಲ್ಲಿರುವ ಪೋಷಕಾಂಶಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಅರಿಶಿನವು ಭಾರತೀಯ ಅಡುಗೆಮನೆಯ ಪ್ರಮುಖ ಪಾತ್ರವಹಿಸುತ್ತದೆ. ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೇ ಔಷಧವಾಗಿಯೂ ಕೆಲಸ ಮಾಡುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿದೆ.
ಅರಿಶಿನವನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ನೀವು ಇದನ್ನು ಬಳಸಬಹುದು. ಉದಾಹರಣೆಗೆ, ಬೆಳಗ್ಗೆ ಅರಿಶಿನ ಮತ್ತು ಚಿಯಾ ಬೀಜಗಳನ್ನು ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಅರಿಶಿನ ಮತ್ತು ಚಿಯಾ ಬೀಜಗಳನ್ನು ಕುಡಿಯಲು ಪ್ರಾರಂಭಿಸಬಹುದು. ಏಕೆಂದರೆ ಚಿಯಾ ಬೀಜಗಳು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ.
ಚಿಯಾ ಬೀಜಗಳ ಇತರ ಆರೋಗ್ಯ ಪ್ರಯೋಜನಗಳು: ಚಿಯಾ ಬೀಜಗಳು ಹೈಡ್ರೋಫಿಲಿಕ್ ಆಗಿರುತ್ತವೆ. ಅಂದರೆ ಅವು ನೀರಿನಲ್ಲಿ ನೆನೆಸಿದಾಗ ಅದನ್ನು ಹೆಚ್ಚಾಗಿ ಹೀರಿಕೊಳ್ಳುತ್ತವೆ. ಚಿಯಾ ಬೀಜಗಳು ತಮ್ಮ ತೂಕದ 10 ಪಟ್ಟು ನೀರನ್ನು ಹೀರಿಕೊಳ್ಳಬಹುದು. ನೆನೆಸಿದಾಗ ಇದು ಜೆಲ್ನಂತಾಗುತ್ತದೆ. ಇದು ನಿಮ್ಮ ದೈನಂದಿನ ದ್ರವ ಸೇವನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ನೀವು ಸಾಕಷ್ಟು ನೀರನ್ನು ಸರಳವಾಗಿ ಕುಡಿಯಲು ಹೆಣಗಾಡುತ್ತಿದ್ದರೆ ಇದು ಅತ್ಯುತ್ತಮ ಆರೋಗ್ಯಕಾರಿ ಆಯ್ಕೆಯಾಗಿದೆ
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿ: ಚಿಯಾ ಬೀಜಗಳಲ್ಲಿನ ಫೈಬರ್ ಅಂಶವು ರಕ್ತಪ್ರವಾಹಕ್ಕೆ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೆನೆಸಿದ ಚಯಾ ಬೀಜಗಳನ್ನು ದಿನವೂ ಸೇವಿಸುವುದು ಮಧುಮೇಹ ಅಥವಾ ಪ್ರಿಡಿಯಾಬಿಟಿಸ್ ಹೊಂದಿರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
ಚರ್ಮದ ಆರೋಗ್ಯ: ಚಿಯಾ ಬೀಜಗಳಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು, ಸ್ವತಂತ್ರ ರಾಡಿಕಲ್ಗಳು ಮತ್ತು ಉರಿಯೂತದಿಂದ ಉಂಟಾಗುವ ಹಾನಿಯಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.