ಮುಂಬೈ: ಕ್ರೀಡೆಗಳ ಮಹಾಸಂಗಮ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympic 2024) ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಬಿಸಿಸಿಐ (BCCI) ಬರೋಬ್ಬರಿ 8.5 ಕೋಟಿ ನೆರವು ಘೋಷಿಸಿದೆ.
ತಮ್ಮ ವೃತ್ತಿ ಜೀವನದ ಮೂರು ಅತ್ಯುತ್ತಮ ಕ್ಷಣಗಳನ್ನು ತಿಳಿಸಿದ ರೋಹಿತ್ ಶರ್ಮಾ
ಹೌದು. ವಿಶ್ವದ ಅತಿ ದೊಡ್ಡ ಕ್ರೀಡೆಗಳ ಮಹಾಸಂಗಮ ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತ ಸಜ್ಜಾಗಿದೆ. ಇದೇ ಜುಲೈ 26 ರಿಂದ ಪ್ರಾರಂಭವಾಗುವ ಕ್ರೀಡಾ ಹಬ್ಬಕ್ಕೆ ದೇಶದ 117 ಕ್ರೀಡಾಪಟುಗಳ ತಂಡ ಸಿದ್ಧಗೊಂಡಿದೆ. ಕ್ರೀಡಾ ಗ್ರಾಮದಲ್ಲಿ ವಿವಿಧ ದೇಶಗಳ ಎದುರಾಳಿಗಳ ವಿರುದ್ಧ ಕಾದಾಟ ನಡೆಸಲು ಸಿಂಹದ ಮರಿಗಳ ಸೈನ್ಯ ಸಜ್ಜಾಗಿದೆ. ಟೊಕಿಯೊ ಒಲಿಂಪಿಕ್ಸ್ನಲ್ಲಿ ದಾಖಲೆಯ ಪದಕ ಗೆದ್ದು ಅಭಿಯಾನ ಮುಗಿಸಿದ್ದ ಭಾರತ ಈ ಬಾರಿ ಎರಡಂಕಿ ದಾಟಬೇಕೆಂದು ಪಣತೊಟ್ಟಿದೆ. ಏಷ್ಯನ್ ಗೇಮ್ಸ್ನಲ್ಲಿ 100+ ಪದಕ ಗೆದ್ದಿದ್ದ ಭಾರತ, ಒಲಿಂಪಿಕ್ಸ್ನಲ್ಲೂ 10+ ಪದಕ ಗೆಲ್ಲುವ ಉತ್ಸಾಹದೊಂದಿಗೆ ಕ್ರೀಡಾ ಅಂಗಳಕ್ಕೆ ಧುಮುಕುತ್ತಿದೆ.
ಈ ಹೊತ್ತಿನಲ್ಲೇ ವಿಶ್ವದ ಶ್ರೀಮಂತ ಕ್ರೀಡಾಮಂಡಳಿ ಎಂದೇ ಹೆಸರು ಪಡೆದುಕೊಂಡಿರುವ ಬಿಸಿಸಿಐ, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ಗೆ 8.5 ಕೋಟಿ ರೂ. ನೀಡಲು ಮುಂದಾಗಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ