ನೆಲಮಂಗಲ: ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಆಗುವುದಾಗಿ ಮಹಿಳೆಗೆ ವಂಚಿಸಿ, ಲವ್, ಸೆಕ್ಸ್, ದೋಖಾ ಮಾಡಿರುವಂತಹ ಘಟನೆ ನಡೆದಿದೆ.
ಜಪಾನ್ ದೇಶದ ಕಾನೂನು ಉಲ್ಲಂಘನೆ: ಒಲಿಂಪಿಕ್ಸ್ನಿಂದ ಖ್ಯಾತ ಜಿಮ್ನಾಸ್ಟ್ ಔಟ್..!
ಮಹಿಳೆಯ ಬಳಿ 41 ಲಕ್ಷ ರೂ. ಹಣ ಮತ್ತು 5 ಲಕ್ಷ ರೂ. ಮೌಲ್ಯದ ಎಲ್ಐಸಿ ಬಾಂಡನ್ನು ಕಿತ್ತುಕೊಂಡು ಮೋಸ ಮಾಡಿದ್ದಾನೆ. ಚಿಕ್ಕಬಾಣಾವಾರದ ವಿಶ್ವನಾಥ ಅಲಿಯಾಸ್ ವಿಷ್ಣುಗೌಡ ಎಂಬುವವರಿಂದ ವಂಚನೆ ಆರೋಪ ಮಾಡಲಾಗಿದೆ. 11 ವರ್ಷದ ಹಿಂದೆ ಮಹಿಳೆಗೆ ವಿಚ್ಛೇದನವಾಗಿದೆ. ಬಳಿಕ ಇಬ್ಬರಿಗೂ ಪರಿಚಯವಾಗಿದೆ. ವಿಶ್ವನಾಥ ಅಲಿಯಾಸ್ ವಿಷ್ಣುಗೌಡ ಪೊಲೀಸ್ ಡ್ರೆಸ್ನಲ್ಲಿ ಇರುವ ಫೋಟೋ ಹಾಗೂ ಗನ್ ಇರುವುದನ್ನು ನೋಡಿರುವ ಮಹಿಳೆ ಪೊಲೀಸ್ ಹುದ್ದೆಯಲ್ಲಿರಬಹುದು ಎಂದು ನಂಬಿದ್ದಾರೆ. ಆದರೆ ಆತ ನಕಲಿ ಪೊಲೀಸ್ ಎಂಬುದು ನಂತರ ಗೊತ್ತಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಬಾಣಾವರ ಬ್ರಾಂಚ್ನ 183258, 183259, 183260 ಮತ್ತು 183261 ನಂಬರಿನ ಚೆಕ್ಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾನೆ. ಮನೆಗೆ ನುಗ್ಗಿ ಮಹಿಳೆಯ ತಂದೆ ತಾಯಿ ಮೇಲೆ ಕೂಡ ಹಲ್ಲೆ ಮಾಡಿದ್ದು, ಮಹಿಳೆ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೇರೆದಿದ್ದಾನೆ.
ದೈಹಿಕವಾಗಿ ಬಳಸಿಕೊಂಡಿದ್ದು, ಇಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.