ಆರ್ ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕನ್ನಡಿಗನೇ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಆಗಲಿದ್ದಾನೆ ಎಂದು ವರದಿಯಾಗಿದೆ.
ಬೆರಳಿನ ಮೂಳೆ ಮುರಿತ: ಏಷ್ಯಾಕಪ್ನಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್!
ಕೆಎಲ್ ರಾಹುಲ್ ಐಪಿಎಲ್ 2025ರ ಮುನ್ನವೇ ಲಕ್ನೋ ತಂಡವನ್ನು ತೊರೆಯುವ ಸಾಧ್ಯತೆಯಿದ್ದು, ಟೈಮ್ಸ್ ವರದಿಯ ಅನ್ವಯ ರಾಹುಲ್ ಮುಂದಿನ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಕೆಎಲ್ ರಾಹುಲ್, ಲಕ್ನೋ ತಂಡವನ್ನು 2022ರಿಂದ 2024ರ ವರೆಗೂ ಮುನ್ನಡೆಸಿದ್ದು, ಐಪಿಎಲ್ 2024 ರಲ್ಲಿ ಸೋತ ನಂತರ ಫ್ರಾಂಚೈಸಿ ಹಾಗೂ ಕ್ಯಾಫ್ಟನ್ ನಡುವೆ ಭಿನ್ನಭಿಪ್ರಾಯ ಎದುರಾಗಿದೆಯಂತೆ. ಈ ಹಿನ್ನೆಲೆಯಲ್ಲಿ ತಂಡದಿಂದ ದೂರ ಆಗಲಿದ್ದಾರೆ ಎನ್ನಲಾಗಿದೆ.
ಲಕ್ನೋ ತಂಡ ಮಾತ್ರವಲ್ಲದೇ ಕೆಎಲ್ ರಾಹುಲ್ ಅವರು ಐಪಿಎಲ್ ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವವನ್ನು ಹೊಂದಿದ್ದಾರೆ. ಟೀಂ ಇಂಡಿಯಾ ನಾಯಕರಾಗಿಯೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ ಅನುಭವವಿದೆ
ಈ ನಡುವೆ ಅವರು RCBಗೆ ಕಮ್ ಬ್ಯಾಕ್ ಮಾಡ್ತಿರೋದಕ್ಕೆ ರಾಹುಲ್ ಹಾಗೂ ಫ್ರಾಂಚೈಸಿ ಕೂಡ ಸಕರಾತ್ಮಕವಾಗಿ ಸ್ಪಂಧನೆ ನೀಡದೆಯಂತೆ. ಕೆಎಲ್ ರಾಹುಲ್ ಬೆಂಗಳೂರಿನ ಹುಡುಗ ಆಗಿದ್ದು, ಈ ಹಿಂದೆಯೂ ಆರ್ ಸಿಬಿ ಪರ ಕೆಎಲ್ ರಾಹುಲ್ ಆಡಿದ್ದರು.
2025 ಐಪಿಎಲ್ ಗೂ ಮುನ್ನವೇ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಸದ್ಯ ಆರ್ ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಫಾಫ್ ಡು ಪ್ಲೆಸಿಸ್ ಅವರಿಗೆ 40 ವರ್ಷ ವಯಸ್ಸಾಗಿದ್ದು, ಅವರ ಬದಲಿಗೆ ತಂಡವನ್ನು ಮುನ್ನಡೆಸಲು ಹೊಸ ಮುಖವನ್ನು ಫ್ರಾಂಚೈಸಿ ಹುಡುಕುತ್ತಿದೆ. ಅಂದಹಾಗೇ, ದಕ್ಷಿಣ ಆಫ್ರಿಕಾದ ಡುಪ್ಲೆಸಿ ಅವರು 2022ರ ಆವೃತ್ತಿಯಿಂದ ಆರ್ ಸಿಬಿ ತಂಡವನ್ನು ಮುನ್ನಡೆಸುತ್ತಿದ್ದು, ಅವರ ನಾಯಕತ್ವದಲ್ಲಿ ಮೂರು ಆವೃತ್ತಿಗಳಲ್ಲಿ ಪ್ಲೇಆಫ್ಗಳಿಗೆ ಪಡೆದುಕೊಂಡಿದಷ್ಟೇ ಸಾಧನೆಯಾಗಿದೆ