ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೆ ಸದ್ಯದಲ್ಲೇ ಬಿಸಿಸಿಐ ದಿನಾಂಕ ನಿಗದಿ ಪಡಿಸಲಿದೆ. ಇದೇ ಜುಲೈ ತಿಂಗಳಾಂತ್ಯದ ವೇಳೆಗೆ ಬಿಸಿಸಿಐ (BCCI) ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ನಡುವೆ ಫ್ರಾಂಚೈಸಿಗಳಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ.
3 ವರ್ಷಗಳಿಗೊಮ್ಮೆ ನಡೆಯುವ ಮೆಗಾ ಹರಾಜಿನಲ್ಲಿ ಯಾವ ಯಾವ ದಿಗ್ಗಜ ಆಟಗಾರರು ಯಾವ ತಂಡವನ್ನು ಸೇರಲಿದ್ದಾರೆ ಅನ್ನೋ ಬಗ್ಗೆ ಕ್ರಿಕೆಟ್ ಪ್ರಿಯರ ಚಿತ್ತ ಹರಿದಿದೆ. ಸಿಎಸ್ಕೆ ತಂಡದ ಲೆಜೆಂಡ್ ಎಂ.ಎಸ್ ಧೋನಿ (MS Dhoni) ಅವರು ಐಪಿಎಲ್ಗೆ ನಿವೃತ್ತಿ ಹೇಳುವ ಸಾಧ್ಯತೆಗಳಿವೆ ಎಂಬ ಸುದ್ದಿಗಳ ನಡುವೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals0 ತಂಡದ ನಾಯಕ ರಿಷಭ್ ಪಂತ್, ಮುಂದಿನ ಆವೃತ್ತಿಗೆ ಸಿಎಸ್ಕೆ (CSK) ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಚ್ಛೇದನ ಪಡೆದ ಟೀಂ ಇಂಡಿಯಾದ ಕ್ರಿಕೆಟಿಗರಿವರು: ಯಾರಂತ ನಿಮಗೂ ಕುತೂಹಲವೇ
2016ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮುಂದಿನ ವರ್ಷದ ಐಪಿಎಲ್ಗೆ ನಡೆಯಲಿರುವ ಮೆಗಾ ಹರಾಜಿಗೂ ಮುನ್ನವೇ ಡೆಲ್ಲಿ ಫ್ರಾಂಚೈಸಿ ತೊರೆದು 5 ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ.
2024ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಟ್ರೋಫಿ ತಂದುಕೊಡುವಲ್ಲಿ ವಿಫಲರಾದ ಡೆಲ್ಲಿ ತಂಡದ ಮುಖ್ಯಕೋಚ್ ಆಗಿದ್ದ ರಿಕಿ ಪಾಂಟಿಂಗ್ಗೆ ಫ್ರಾಂಚೈಸಿ ಈಗಾಗಲೇ ಕೊಕ್ ನೀಡಿದೆ. ರಿಷಭ್ ಪಂತ್ ಅವರನ್ನೂ ಉಳಿಸಿಕೊಳ್ಳುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮುಂದಿನ ಕೋಚ್ ಎನ್ನಲಾಗುತ್ತಿರುವ ಗಂಗೂಲಿ ಅವರು ರಿಷಭ್ ಪರವಾಗಿದ್ದಾರೆ ಎನ್ನಲಾದರೂ ಫ್ರಾಂಚೈಸಿ ತೀರ್ಮಾನ ಅಂತಿಮವಾಗಲಿದೆ. ಹೀಗಾಗಿ ಪಂತ್ ಮೆಗಾ ಹರಾಜಿಗೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.