ಬೆಂಗಳೂರು:- ಕೆಂಪೇಗೌಡ ಏರ್ಪೋರ್ಟ್ನಿಂದ ವಿವಿಧೆಡೆಗೆ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳನ್ನು ರದ್ದು ಮಾಡಲಾಗಿದ್ದು, ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ
ಇಂಡಿಗೋ ಏರ್ಲೈನ್ಸ್ ಕಚೇರಿಯಲ್ಲಿ ಮಾಹಿತಿ ಪಡೆಯಲು ಗಂಟೆಗಟ್ಟಲೇ ಕ್ಯೂ ನಿಲ್ಲಬೇಕಾಗಿದ್ದು, ಯಾವ ಫ್ಲೈಟ್ ರದ್ದಾಗಿದೆ, ಯಾವುದು ಸಿದ್ಧವಿದೆ ಎಂಬ ಬಗ್ಗೆ ಮಾಹಿತಿ ಕೂಡ ಕೊಡಿಲ್ಲವಂತೆ. ಹಾಗಾಗಿ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿಯ ವಿರುದ್ಧ ಪ್ರಯಾಣಿಕರು ಗರಂ ಆಗಿದ್ದಾರೆ
ವಿಶ್ವದಾದ್ಯಂತ ಮೈಕ್ರೋಸಾಫ್ಟ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ ವಿಮಾನ ಸಂಚಾರದಲ್ಲಿ, ರೈಲು ಸಂಚಾರದಲ್ಲಿ, ಬ್ಯಾಂಕಿಂಗ್, ಷೇರು ಪೇಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.