ಬೆಂಗಳೂರು:- ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿರೋದು ನಿಜ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Loka Raid: ಭ್ರಷ್ಟರಿಗೆ ಲೋಕಾಯುಕ್ತ ಶಾಕ್: ಯಾವ್ಯಾವ ಅಧಿಕಾರಿಗಳ ಬಳಿ ಎಷ್ಟೆಷ್ಟು ಸಿಕ್ಕಿದೆ?
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಗೆ ನಾನು ಈಗ ಸಚಿವ. ನಾಗೇಂದ್ರ ರಾಜೀನಾಮೆ ಕೊಟ್ಡ ಮೇಲೆ ನಾನು ಆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಾವು ಅಕ್ರಮ ಆಗಿಲ್ಲ ಅಂತ ಹೇಳ್ತಿಲ್ಲ, ಅಕ್ರಮ ಆಗಿದೆ. ಯಾರು ಮಾಡಿದ್ದು, ಯಾರು ಜವಾಬ್ದಾರಿ? ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ ಅಂತ ಸಿಎಂ ಹೇಳಿದ್ದಾರೆ.
ಹಣಕಾಸು ಜವಾಬ್ದಾರಿ ನಿಭಾಯಿಸೋದು ನಿಗಮದ ಎಂಡಿ, ಅಧಿಕಾರಿಗಳ ಜವಾಬ್ದಾರಿ. ಹಣದ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರೋದು ಎಂಡಿಯದ್ದು. ಮಿನಿಸ್ಟರ್ ಪಾಲಿಸಿ ಮೇಕರ್, ಆದರೆ ಹೆಚ್ಚು ಜವಾಬ್ದಾರಿ ಎಂಡಿಯದ್ದು. ಎಂಡಿ ನಿಗಮದ ಹೆಡ್ ಆಗಿರುತ್ತಾರೆ, ಅಧ್ಯಕ್ಷರೂ ಅಲ್ಲ. ದದ್ದಲ್ ಅವರನ್ನ ಅಧ್ಯಕ್ಷರಾಗಿ ಮಾಡಿದ್ವಿ. ನಾಗೇಂದ್ರ ಮಿನಿಸ್ಟರ್ ಆಗಿದ್ರು. ಅವರ ಕಾಲದಲ್ಲಿ ಅಕ್ರಮ ಆಗಿದೆ ಅಂತ ಎಂದು ಸ್ಪಷ್ಟಪಡಿಸಿದ್ದಾರೆ.
ನಿಗಮದ ಹಣವನ್ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಸಂತ ನಗರ ಶಾಖೆಯಲ್ಲಿ ಇಡಲಾಗಿತ್ತು. ಅಲ್ಲಿ ಶೋಭನಾ ಎನ್ನುವ ವ್ಯವಸ್ಥಾಪಕಿ ಎಂ.ಜಿ ರಸ್ತೆಯ ಬ್ರ್ಯಾಂಚ್ಗೆ ಹಣವನ್ನ ವರ್ಗಾಯಿಸಿದ್ದಾರೆ. ಬೇರೆ ಬೇರೆ ಕಡೆಯಿಂದ 187 ಕೋಟಿ 33 ಲಕ್ಷ ರೂ. ಹಣವನ್ನ ಎಂ.ಜಿ ರಸ್ತೆಯ ಶಾಖೆಗೆ ವರ್ಗಾವಣೆ ಮಾಡಿದ್ದಾರೆ. ಎಂ.ಜಿ ರಸ್ತೆ ಶಾಖೆಯ ದೀಪಾ, ಕೃಷ್ಟಮೂರ್ತಿ, ಮತ್ತೊಬ್ಬ ಅಧಿಕಾರಿಯೂ ಇದರಲ್ಲಿ ಭಾಗಿಯಾಗಿದ್ದಾರೆ. ಈ ಶಾಖೆಯಿಂದ 187 ಕೋಟಿ ರೂ. ಹಣದಲ್ಲಿ 89.63 ಕೋಟಿ ರೂ. ಹಣ 18 ಅಕೌಂಟ್ಗೆ ತೆಲಂಗಾಣಕ್ಕೆ ಹೋಗಿದೆ ಎಂದು ಹೇಳಿದರು
ರತ್ನಾಕರ ಸಹಕಾರ ಬ್ಯಾಂಕ್ಗೆ 87 ಕೋಟಿ ಹೋಗುವಾಗ ಯೂನಿಯನ್ ಬ್ಯಾಂಕ್ನವರು ಯಾಕೆ ಹೈದರಾಬಾದ್ಗೆ ಹೋಗ್ತಿದ್ದಾರೆ ಅಂತ ಕೇಳಬೇಕಿತ್ತು ಅಲ್ಲವಾ? ಇದ್ಯಾವುದನ್ನು ಸದನದಲ್ಲಿ ಅಶೋಕ್ ಕೇಳಲಿಲ್ಲ. ನಿಗಮದಲ್ಲಿ ಚಂದ್ರಶೇಖರ ಅನ್ನೋರು ಅಧೀಕ್ಷಕನಾಗಿರುತ್ತಾರೆ. ಮೇ 26 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ತಾರೆ. ಬಳಿಕ ಪತ್ತೆಯಾದ ಡೆತ್ನೋಟ್ನಲ್ಲಿ ಪದ್ಮನಾಭ, ಪರಶುರಾಮ, ಸುಚಿಸ್ಮಿತಾ ಅವರು ಕಾರಣ ಅಂತ ಬರೆದಿರುತ್ತಾರೆ. 25 ಕೋಟಿ ರೂ. ಅಕ್ರಮವಾದ್ರೆ ಸಿಬಿಐಗೆ ದೂರು ಕೊಡೋ ಅವಕಾಶ ಇದೆ ಎಂದು ತಿಳಿಸಿದ್ದಾರೆ.