ಸೊಳ್ಳೆಗಳನ್ನು ಮನೆಯಿಂದ ಸುಲಭವಾಗಿ ಓಡಿಸುವಂತಹ ಕೆಲ ನೈಸರ್ಗಿಕ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳಿ. ಹಾಗಾದ್ರೆ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಈ ಪದಾರ್ಥಗಳ ಬಗ್ಗೆ ತಿಳಿದು, ಉಪಯೋಗಿಸಿ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಆಗಿದೆ: ನಿಜ ಒಪ್ಪಿಕೊಂಡ್ರಾ ಸಿಎಂ ಸಿದ್ದರಾಮಯ್ಯ?
ಬೆಳ್ಳುಳ್ಳಿ: ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬೆಳ್ಳುಳ್ಳಿಯನ್ನು ಬಳಸಬಹುದು. ಬೆಳ್ಳುಳ್ಳಿಯ ವಾಸನೆಯು ಸೊಳ್ಳೆಗಳನ್ನು ನಿಮ್ಮಿಂದ ದೂರವಿಡುತ್ತದೆ. ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬೆಳ್ಳುಳ್ಳಿಯನ್ನು ಕತ್ತರಿಸಿ. ನಂತರ ಒಂದು ಬಾಟಲಿನಲ್ಲಿ ನೀರನ್ನು ತುಂಬಿಸಿ, ಅದಕ್ಕೆ ಬೆಳ್ಳುಳ್ಳಿ ಸೇರಿಸಿ, ಈ ನೀರನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ನೀರನ್ನು ಮನೆಯ ಎಲ್ಲಾ ಮೂಲೆಗಳಲ್ಲಿಯೂ ಚಿಮುಕಿಸಿ. ಹೀಗೆ ಮಾಡುವುದರಿಂದ ಸೊಳ್ಳೆಗಳ ಕಾಟ ಇರುವುದಿಲ್ಲ.
ಕರ್ಪೂರ: ನೀವು ಕರ್ಪೂರವನ್ನು ಬಳಸಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಮನೆಯ ಬಾಗಿಲು ಮುಚ್ಚಿ ಕರ್ಪೂರ ಹಚ್ಚಬೇಕು. ಕರ್ಪೂರವನ್ನು ಬೆಳಗಿದ ಅರ್ಧ ಗಂಟೆಯ ನಂತರ, ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ. ಕರ್ಪೂರದ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಕರ್ಪೂರವು ಸೊಳ್ಳೆಗಳನ್ನು ಸುಲಭವಾಗಿ ಹೊರ ಹೋಗುವಂತೆ ಮಾಡುತ್ತದೆ
ಬೇವಿನ ಎಣ್ಣೆ: ಈ ಸರಳ ಉಪಾಯದಿಂದ ನೀವು ಸೊಳ್ಳೆಗಳನ್ನು ಸಹ ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಬೇವಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಬೇಕು. ನೀವು ಇದನ್ನು ನೇರವಾಗಿ ಹಚ್ಚಲು ಸಾಧ್ಯವಿಲ್ಲದಿದ್ದರೆ, ಅದನ್ನು ನೀರಿನಲ್ಲಿ ಬೆರೆಸಿ ನಿಮ್ಮ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಿ. ಏಕೆಂದರೆ ಬೇವಿನ ಎಣ್ಣೆಗೆ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಸಾಮಾರ್ಥ್ಯವಿದೆ.
ನಿಂಬೆ ಲವಂಗ ಟ್ರಿಕ್: ನೀವು ಈ ಸರಳವಾದ ಟ್ರಿಕ್ ಮೂಲಕ ಕೂಡ ಸೊಳ್ಳೆಗಳನ್ನು ಹಿಮ್ಮೆಟ್ಟಿಸಬಹುದು. ಇದನ್ನು ಮಾಡಲು, ನಿಂಬೆಯನ್ನು ಅರ್ಧದಷ್ಟು ಕತ್ತರಿಸಿ. ಈಗ ಲವಂಗವನ್ನು ಪುಡಿ ಮಾಡಿ. ನಂತರ ನಿಂಬೆಯಲ್ಲಿ ಲವಂಗದ ಪುಡಿಯನ್ನು ಸೇರಿಸಿ ಮನೆಯ ಮೂಲೆಯಲ್ಲಿ ಇರಿಸಿ. ಇದಕ್ಕಾಗಿ ನೀವು ಒಂದಕ್ಕಿಂತ ಹೆಚ್ಚು ನಿಂಬೆ ಬಳಸಬೇಕು. ಈ ವಿಧಾನವನ್ನು ಅನುಸರಿಸುವ ಮೂಲಕ ಸೊಳ್ಳೆಗಳನ್ನು ನೀವು ಸುಲಭವಾಗಿ ಹಿಮ್ಮೆಟ್ಟಿಸಬಹುದು.
ತುಳಸಿ ಎಲೆಗಳು: ತುಳಸಿ ಎಲೆಗಳು ಸೊಳ್ಳೆಗಳನ್ನು ಸುಲಭವಾಗಿ ಹಿಮ್ಮೆಟ್ಟಿಸುತ್ತದೆ. ಇದಕ್ಕಾಗಿ ತುಳಸಿ ಎಲೆಗಳನ್ನು ನುಣ್ಣಗೆ ಅರೆದು ಜ್ಯೂಸ್ ಮಾಡಿ. ಈ ರಸವನ್ನು ಸ್ಪ್ರೇ ಬಾಟಲಿಗೆ ಸುರಿದು, ನಂತರ ಅದನ್ನು ಮನೆಯ ಮೂಲೆ ಮೂಲೆಯಲ್ಲೂ ಸಿಂಪಡಿಸಿ. ತುಳಸಿಯ ವಾಸನೆ ತಡೆಯಲಾಗದೇ ಸೊಳ್ಳೆಗಳು ಓಡಿ ಹೋಗುತ್ತವೆ.