ಬೆಂಗಳೂರು: ನನ್ನ ಹೆಸರಿಗೆ ಮಸಿ ಬಳಿಯುವುದು ಬಿಜೆಪಿ ಉದ್ದೇಶವಾಗಿದೆ ಹಾಗೆ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ ಬಿಜೆಪಿಯವರು ನನ್ನ ಮೇಲೆ ಹಾಡು ಬೇರೆ ಹೇಳ್ತಿದ್ರು ಬಿಜೆಪಿಯವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾಲದಲ್ಲಿನ ಹಗರಣಗಳನ್ನು ಬಿಚ್ಚಿಡ್ತೀವಿ ಎಂಬ ಭಯ ಇದೆ. ಇವರು ಭ್ರಷ್ಟಾಚಾರದ ಪಿತಾಮಹರು. ಇವರು ನಮಗೆ ಪಾಠ ಹೇಳಲು ಬಂದಿದ್ದಾರೆ. ಯಾವತ್ತೂ ಇಷ್ಟೊಂದು ಕೆಟ್ಟ ರೀತಿಯಲ್ಲಿ ವಿರೋಧ ಪಕ್ಷ ನಡೆದುಕೊಂಡಿಲ್ಲ. ಕೇಂದ್ರ ಸರ್ಕಾರ ಹಾಗೂ RSS ಸೂಚನೆ ಮೇರೆಗೆ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಬಿಜೆಪಿ ಅವಧಿಯಲ್ಲಿನ 21 ಹಗರಣ ಪಟ್ಟಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ: ಇಲ್ಲಿದೆ ನೋಡಿ!
ಬಿಜೆಪಿ ವರ್ತನೆ ಸಂಸದೀಯ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಗೆ ಇಷ್ಟವಿಲ್ಲ. ಪ್ರವಾಹದ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಮಾತನಾಡುವಾಗ ಗೇಲಿ ಮಾಡುತ್ತಾರೆ. ಬಿಜೆಪಿಗೆ ರಾಜ್ಯದ ಹಿತಾಸಕ್ತಿ ಆಸಕ್ತಿ ಇಲ್ಲ. ರಾಜಕೀಯ ಮಾಡಲು ಈ ರೀತಿಯ ಆರೋಪ ಮಾಡ್ತಿದ್ದಾರೆ. ED ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದೆ. 121 ಪ್ರಕರಣಗಳಲ್ಲಿ 115 ವಿರೋಧ ಪಕ್ಷದ ವಿರುದ್ಧ ಇಡಿ ದಾಳಿಯಾಗಿದೆ. ಬಿಜೆಪಿಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ಗೌರವ ಇಲ್ಲ ಎಂದು ಕಿಡಿಕಾರಿದ್ದಾರೆ.