ಗಡಿ ಜಿಲ್ಲೆ ಬೀದರ ನಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ ಕಲಿಯಲಿಕ್ಕೆ ಸುಸರ್ಜೀತ ಕಟ್ಟಡ ಇಲ್ಲದೆ ಮಕ್ಕಳು ಗ್ರಾಮದ ದೇವಸ್ಥಾನ ದಲ್ಲಿ ಕುಳಿತು ಪಾಠ ಕೇಳೋದು ಅನಿವಾರ್ಯ ವಾಗಿದೆ…ಬೀದರ ಜಿಲ್ಲೆಯ ಹುಮನಾಬಾದ ತಾಲುಕಿನ ಬೋತಗಿ ಗ್ರಾಮದ ಶಾಲೆ ಧುಸ್ಥಿತಿ ಇದಾಗಿದ್ದೆ ಮಕ್ಕಳು ಶಾಲೆಯಲ್ಲಿ ಕುಳಿತು ಪಾಠ ಕೆಳ ಬೇಕಾದರೆ ನೀರಿನಲ್ಲಿ ಕುಳಿತು ಪಾಠ ಕೇಳಬೇಕು ಈ ಶಾಲೆ ಯಲ್ಲಿ ಒಂದನೇ ತರಗತಿಯಿಂದ 5_ನೇ ತರಗತಿ ವರೆಗೂ ಮಕ್ಕಳು ಇದ್ದಾರೆ.. ಒಂದೇ ಕೊಠಡಿಯಲ್ಲಿ ಪಾಠ ಪ್ರವಚನ ಊಟ.ಇಬ್ಬರು ಶಿಕ್ಷಕರು ಒಂದೇ ತರಗತಿಯಲ್ಲಿ ಮಕ್ಕಳಿಗೆ ಪಾಠ ಬೋಧನೆ.1ರಿಂದ 5ನೇ ತರಗತಿಯ ಮಕ್ಕಳಿಗೆ ಇಬ್ಬರು ಶಿಕ್ಷಕರು ಮಾತ್ರ..
ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬೋತಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿಲ್ಲ..ಇರುವ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ.ಹೀಗಾಗಿ ಕಳೆದ ಮೂರು ವರ್ಷಗಳಿಂದ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಕುಳಿತು ಮಕ್ಕಳಿಗೆ ಪಾಠ-ಪ್ರವಚನ ಮಾಡಲಾಗಿದೆ.ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 17 ಮಕ್ಕಳು …ಹಲವು ದಶಕಗಳ ಹಿಂದೆ ನಿರ್ಮಿಸಿದ್ದ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಸೋರುತ್ತಿವೆ..ಸದ್ಯ ಮಕ್ಕಳಿಗೆ ಶಾಲೆ ಎದುರಿನ ಲಕ್ಷ್ಮಿ ದೇವಸ್ಥಾನವೇ ತರಗತಿ ಕೋಣೆಯಾಗಿ ಪರಿವರ್ತನೆಯಾಗಿದೆ.
ಒಂದೇ ಕೊಠಡಿ ನಾಲ್ಕು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಬೋಧನೆ…
ಶಾಲೆಗೆ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿ ಇತರ ಮೂಲ ಸೌಕರ್ಯ ಕೊರತೆಯಿಂದಾಗಿ ದಾಖಲಾತಿ ಕುಸಿದಿತ್ತು…2015 ರಿಂದ ಇಲ್ಲಿ 1 ರಿಂದ 5ನೇ ತರಗತಿವರೆಗೆ ಮಾತ್ರ ಶಾಲೆ ನಡೆಯುತ್ತಿದೆ…ಶಾಲೆಯ ಎರಡು ಕೊಠಡಿಗಳ ಮೇಲ್ಛಾವಣಿ ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ತಲುಪಿವೆ..
ಹೀಗಾಗಿ ಪಕ್ಕದ ಅಂಗನವಾಡಿ ಕೇಂದ್ರದ ಖಾಲಿ ಕೋಣೆಯೊಂದರಲ್ಲಿ ಓರ್ವ ಶಿಕ್ಷಕರು ನಾಲ್ಕು ತರಗತಿ ನಡೆಸಿದರೆ, ಇನ್ನೋರ್ವ ಶಿಕ್ಷಕರು ಉಳಿದ ತರಗತಿ ಮಕ್ಕಳಿಗೆ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಬೋಧಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.ಆಟದ ಮೈದಾನ, ಶೌಚಾಲಯ ಇಲ್ಲ:.ಇನ್ನು ಆಟದ ಮೈದಾನ, ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾದ ಪರಿಣಾಮ ಮಕ್ಕಳು ಶೌಚಕ್ಕೆ ಮನೆಗೆ ತೆರಳಬೇಕಾದ ಅನಿವಾರ್ಯತೆ ಇದೆ.
“ಶಾಲೆಗೆ ಮೌಲ ಸೌಕರ್ಯ ಕೊರತೆ ಇರುವ ಪೋಷಕರು ಗ್ರಾಮದ ಶಾಲೆಯ ಮೇಲೆ ನಿರುತ್ಸಾಹ ತೋರಿ ಖಾಸಗಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ..ಇದರಿಂದ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಗೆ ಕೇವಲ 3 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಹೀಗೆ ಮುಂದುವರೆದರೆ ಶಾಲೆ ಮುಚ್ಚುಬೇಕಾದ ಪರಿಸ್ಥಿತಿ ಬರುತ್ತದೆ” ಎನ್ನುತ್ತಾರೆ ಗ್ರಾಮಸ್ಥರು. ಕೂಡಲೇ ಶಾಲೆಗೆ ವರ್ಗ ಕೋಣೆಗಳು ನಿರ್ಮಿಸಿ ಕೊಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಶಾಲೆ ಬಂದ್ ಮಾಡುವ ಮೂಲಕ ಹೋರಾಟ ಮಾಡಲಾಗುವುದು ಎಂದು ಶಾಲೆತ ಮಕ್ಕಳ ಪಾಲಕರು ಎಚ್ಚರಿಸಿದ್ದಾರೆ.