ಅಮೆರಿಕದ ಅಧ್ಯಕ್ಷ ಜೋ ಬೈಡನ್ಗೆ ಕೊರೊನಾ ಧೃಡವಾಗಿದೆ. ಕೊರೊನಾದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಅವರು ಪ್ರತ್ಯೇಕವಾಗಿರಲಿದ್ದಾರೆ.
ಬೆಂಗಳೂರಿಗರಿಗೆ ತಪ್ಪದ ಸಂಕಷ್ಟ: ಡೆಂಗ್ಯೂ, ಚಿಕನ್ ಗುನ್ಯಾ ನಡುವೆ ಇಲಿ ಜ್ವರದ ಆತಂಕ!
ಜೋ ಬೈಡನ್ಗೆ ಜುಲೈ 17ರಂದು ಕೊರೊನಾ ಸೋಂಕು ದೃಢಪಟ್ಟಿದೆ. ಇದಕ್ಕೂ ಒಂದು ದಿನದ ಮೊದಲು ಅವರು ಲಾಸ್ವೇಗಾಸ್ನಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು. ಅಂದು ತಮ್ಮ ಎದುರಾಳಿ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಬೈಡನ್ ಎಲ್ಲಾ ಲಸಿಕೆಗಳನ್ನು ಹಾಕಿಸಿಕೊಂಡಿದ್ದರು, ಬೂಸ್ಟರ್ ಡೋಸ್ಗಳನ್ನು ಕೂಡ ಪಡೆದಿದ್ದರು, ಕಳೆದ ಸೆಪ್ಟೆಂಬರ್ನಲ್ಲಿ ಬೂಸ್ಟರ್ ಡೋಸ್ ನೀಡಲಾಗಿತ್ತು. ಇದಾದ ಬಳಿಕವೂ ಅವರಿಗೆ ಕೊರೊನಾ ಸೋಂಕು ತಗುಲಿದೆ.