ಬೆಂಗಳೂರು:- ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ CM, DCM ಇದ್ದಾರೆ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ.
ಡಿಸಿಎಂ ಅರೋಪಗಳಿಗೆ ಕ್ಲೀನ್ ಚಿಟ್ ನೀಡಿದರೆ, ಮುಖ್ಯಮಂತ್ರಿಯವರು ಹಗರಣ ನಡೆದಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ. ನಿಗಮದಲ್ಲಿ ಅವ್ಯವಹಾರ ನಡೆದಿರುವುದನ್ನು ಯೂನಿಯನ್ ಬ್ಯಾಂಕ್ ಸಿಬಿಐಗೆ ಪತ್ರ ಬರೆದು ಗಮನಕ್ಕೆ ತಾರದೆ ಹೋಗಿದ್ದರೆ ಪ್ರಕರಣ ಹಳ್ಳ ಹಿಡಿಯುತಿತ್ತು ಮತ್ತು ಆತ್ಮಹತ್ಯೆಗೆ ಶರಣಾದ ನಿಗಮದ ಅಧಿಕಾರಿ ಪಿ ಚಂದ್ರಶೇಖರನ್ ಅವರ ಡೆತ್ ನೋಟನ್ನು ಸಹ ಸರ್ಕಾರ ಮುಚ್ಚಿ ಹಾಕುತಿತ್ತು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈಡಿ ಇನ್ನೂ ಯಾರನ್ನೆಲ್ಲ ವಿಚಾರಣೆಗೆ ಗುರಿಮಾಡುತ್ತದೆಯೋ ಕಾದು ನೋಡೋಣ, ನಾವಂತೂ ಪ್ರಕರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸುವವರೆಗೆ ಸುಮ್ಮನಿರಲ್ಲ ಎಂದರು.