ಹೆಚ್ಚಿನವರಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದು ಕಾಲಿನ ಅಂದವನ್ನು ಹಾಳು ಮಾಡುವುದರ ಜೊತೆಗೆ ಮುಜುಗರವನ್ನು ಉಂಟು ಮಾಡಬಹುದು. ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಡೆದ ಹಿಮ್ಮಡಿಯಿಂದ ವಿಪರೀತ ನೋವು ಅನುಭವಿಸುತ್ತಿದ್ದರೆ ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಬಳಸಿಕೊಳ್ಳಬಹುದು.
Double Decker Flyover: ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ: ಏನಿದರ ವಿಶೇಷ? ಇಲ್ಲಿದೆ ನೋಡಿ
ಸದಾ ನೆಲದ ಸ್ಪರ್ಶದಲ್ಲಿರುವ ಪಾದಗಳಿಗೆ ಧೂಳು, ಕೊಳಕಾಗುವುದು ಸಾಮಾನ್ಯ. ಹಾಗೆಂದು ಅದನ್ನು ಯಾವಾಗಲೂ ನಿರ್ಲಕ್ಶ್ಯ ಮಾಡುವ ಹಾಗಿಲ್ಲ. ಅದರ ಆರೋಗ್ಯದ ಕಡೆಯೂ ಗಮನಹರಿಸಬೇಕಾಗುತ್ತದೆ. ಪಾದಗಳಲ್ಲಿ ಬಿರುಕು ಹಾಗೂ ನೋವು ಉಂಟಾದಾಗ ಅದನ್ನು ಅಸಡ್ಡೆ ಮಾಡುವುದರ ಬದಲು ಅದಕ್ಕೆ ಅಗತ್ಯ ಇರುವಂತಹ ಚಿಕಿತ್ಸೆ ಮಾಡುವುದು ಒಳಿತು. ಈ ನೋವಿಗೆ ವೈದ್ಯರ ಬಳಿ ಓಡುವ ಬದಲು ಸರಳವಾಗಿ ಮನೆಯಲ್ಲಿಯೇ ಮದ್ದನ್ನು ಅರೆಯುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಹುದು. ಹೇಗೆ? ಯಾವ ರೀತಿಯ ಮನೆಮದ್ದನ್ನು ಮಾಡಬೇಕು? ಇಲ್ಲಿದೆ ಸರಳ ಮಾಹಿತಿ.
*ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನೇ ಮನೆ ಮದ್ದಾಗಿ ಬಳಸಿ*
* ಬಾಳೆಹಣ್ಣುಗಳು ಒಣ ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತವೆ. ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ6 ಮತ್ತು ಸಿಗಳು ಹೇರಳವಾಗಿದೆ. ಬಾಳೆಹಣ್ಣನ್ನು ಕಿವುಚಿ ಒಡೆದ ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮವನ್ನು ತೇವಾಂಶಭರಿತವಾಗಿರಿಸುತ್ತದೆ.
* ಜೇನುತುಪ್ಪವು ನೈಸರ್ಗಿಕ ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಜೇನುತುಪ್ಪವು ಒಡೆದ ಪಾದಗಳಿಗೆ ಹಚ್ಚುವುದರಿಂದ ಮಾಯಿಶ್ಚರೈಸರ್ ಆಗಿಯೂ ಕಾರ್ಯನಿರ್ವಹಿಸುವುದಲ್ಲದೆ, ಪಾದಗಳ ಚರ್ಮದಲ್ಲಿನ ಶುಷ್ಕತೆಯನ್ನು ನಿವಾರಿಸುತ್ತದೆ.
*ಒಣ ಚರ್ಮಕ್ಕೆ ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಾಲನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಗಂಟೆ ಇಟ್ಟು ಬಳಿಕ ಒಡೆದ ಹಿಮ್ಮಡಿಗಳಿಗೆ ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.
*ವ್ಯಾಸಲಿನ್ ಮಾಯ್ಚುರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಂಬೆ ರಸವು ಚರ್ಮದ ಕೋಶಗಳ ಪುನಃ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಹಾಗಾಗಿ ಇವೆರಡರ ಮಿಶ್ರಣ ತುಂಬಾ ಒಳ್ಳೆಯದು. ಮೊದಲು ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದವನ್ನು 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತರ ಒಣಗಿದ ಬಟ್ಟೆಯಲ್ಲಿ ಒರೆಸಿ. 3- 4 ಹನಿಯಷ್ಟು ನಿಂಬೆ ರಸಕ್ಕೆ 1 ಟೀ ಚಮಚ ವ್ಯಾಸಲೀನ್ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ ಪಾದ ಹಾಗೂ ಹಿಮ್ಮಡಿಯ ಜಾಗಕ್ಕೆ ಹಚ್ಚಿಕೊಳ್ಳಿ, ಮುಂಜಾನೆ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.ಈ ರೀತಿ ಮಾಡುವುದರಿಂದ ಒಡೆದ ಹಿಮ್ಮಡಿ ನೋವಿನಿಂದ ಪರಿಹಾರ ಸಿಗುತ್ತದೆ.
* ಒಡೆದ ಪಾದಗಳ ಆರೈಕೆಗೆ ಒಂದು ಚಮಚ ಅಡಿಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ 15 ನಿಮಿಷಗಳ ಕಾಲ ಪಾದಗಳನ್ನು ನೀರಿನಲ್ಲಿ ಇಡುವುದರಿಂದ ಮೃದುವಾಗುತ್ತದೆ.
* ಪೆಟ್ರೋಲಿಯಂ ಜೆಲ್ಲಿಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು. ಸ್ವಚ್ಛಗೊಳಿಸಿದ ಪಾದಗಳಿಗೆ ಈ ಮಿಶ್ರಣವನ್ನು ಹಚ್ಚುವುದರಿಂದ ಒಡೆದ ಪಾದಗಳ ಸಮಸ್ಯೆಯೂ ನಿವಾರಣೆಯಾಗುತ್ತದೆ.