ಗೋಕರ್ಣ: ಕುಮಟಾ ತಾಲೂಕಿನ ಗೋಕರ್ಣದಲ್ಲಿ ಇಂದು ಗುಡ್ಡ ಕುಸಿದಿದೆ. ಗೋಕರ್ಣ ಮುಖ್ಯ ಕಡಲತೀರದ ಹತ್ತಿರದ ರಾಮಮಂದಿರ ಬಳಿ ಗುಡ್ಡ ಕುಸಿತವಾಗಿದೆ. ಅದೃಷ್ಟವಶಾತ್ ದೇವಸ್ಥಾನದಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ.
Cucumber Water: ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಉರುಳಿಕೊಂಡು ಬಂದ ಗುಡ್ಡದ ಬೃಹತ್ ಕಲ್ಲು ದೇವಸ್ಥಾನದ ಗೋಡೆಗೆ ತಾಗಿ ನಿಂತಿದೆ. ರಾಮಮಂದಿರ ದೇವಸ್ಥಾನಕ್ಕೆ ಯಾವುದೇ ಹಾನಿ ಆಗಿಲ್ಲ. ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ಪರಿಣಾಮ ಗುಡ್ಡದ ಮಣ್ಣು ಸಡಿಲವಾಗಿದ್ದು, ಮಳೆಗೆ ಕುಸಿದಿದೆ ಎಂದು ಆರೋಪಿಸಲಾಗಿದೆ.