ಶಿರಸಿ: ಶಿರಸಿ ತಾಲ್ಲೂಕಿನ ರಾಗಿಹೊಸಳ್ಳಿ ಬಳಿ ನಿನ್ನೆ ಗುಡ್ಡ ಜರಿದು ಅಪಾರ ಪ್ರಮಾಣದ ಮಣ್ಣು ಹೆದ್ದಾರಿಯ ಮೇಲೆ ಕೂತಿದ್ದು, ನಿನ್ನೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ ತೆರವಾಗಿಲ್ಲ. ಇದರಿಂದ ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿ 766EEಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.
Cucumber Water: ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಹೆದ್ದಾರಿಯ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಮರ ಸಹಿತ ಗುಡ್ಡ ಕುಸಿದಿದ್ದು, ಶಿರಸಿ-ಕುಮಟಾ ಹೆದ್ದಾರಿ ನಿನ್ನೆಯಿಂದ ಬಂದ್ ಆಗಿದೆ. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಗುಡ್ಡ ಕೊರೆಯಲಾಗಿತ್ತು. ಜೆಸಿಬಿ ಮೂಲಕ ನಿನ್ನೆಯಿಂದ ಮಣ್ಣು ತೆರವು ನಡೆಯುತ್ತಿದ್ದು, ಇನ್ನೂ 50 ಮೀಟರ್ನಷ್ಟು ಮಣ್ಣು ತೆರವು ಬಾಕಿಯಿದೆ.