ಗ್ಯಾಂಗ್ಟಾಕ್: ನಾಪತ್ತೆಯಾಗಿದ್ದ ಸಿಕ್ಕಿಂನ ಮಾಜಿ ಸಚಿವ ಆರ್.ಸಿ ಪೌಡ್ಯಾಲ್ (80) ಅವರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿಯ ಬಳಿ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೌಡ್ಯಾಲ್ ಶವ ತೀಸ್ತಾ ನದಿಯಿಂದ ಕಾಲುವೆಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ವಾಚ್ ಮತ್ತು ಧರಿಸಿದ್ದ ಬಟ್ಟೆಗಳಿಂದ ಅವರ ಮೃತದೇಹದ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Zomato: ನನ್ನ ಹೆಂಡತಿ ಹಿಸ್ಟರಿ ಚೆಕ್ ಮಾಡ್ತಾಳೆ: ಗಂಡಂದಿರ ಮನವಿಗೆ ʼʼಹೊಸ ಫೀಚರ್ʼʼ ಸೇರಿಸಿದ ಜೊಮ್ಯಾಟೋ..!
ಜು.7 ರಂದು ಪೌಡ್ಯಾಲ್ ಅವರು ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್ನಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿತ್ತು. ದುರಾದೃಷ್ಟವಶಾತ್ ಅವರು ಸಾವಿಗೀಡಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.