ಕೋಲಾರ:- ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಹಮ್ಮದ್ ಹನೀಫ್ ಅವ್ರು ನಗರದ ಹೊರವಲಯದ ಕೂಡೂ ಕಚೇರಿಯಲ್ಲಿ ಅಧೀಕಾರವನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು,
ಕೋಲಾರ ನಗರವು ಜಿಲ್ಲಾ ಕೇಂದ್ರವಾಗಿದ್ದು ನಗರ ಅಭಿವೃದ್ಧಿಯಾಗ ಬೇಕಿದೆ ಇದು ನನ್ನ ಕನಸಾಗಿದೆ ನಗರದಲ್ಲಿನ ರಸ್ತೆಗಳು ಚರಂಡಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ರೂಪಿಸಲಾಗುತ್ತದೆ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ನಗರವನ್ನು ಮಾದರಿ ನಗರವನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ರು.
ಕಾಂಗ್ರೆಸ್ ಪಕ್ಷದಲ್ಲಿ 1983 ರಿಂದ ನಿಷ್ಠಾವಂತ ಕಾರ್ಯಕರ್ತನಾಗಿ ವಿವಿಧ ಹುದ್ದೆಗಳನ್ನುನಿರ್ವಹಿಸಿದ್ದೆನೆ ಕೊತ್ತೂರು ಮಂಜುನಾಥ್ ನಸೀರ್ ಅಹಮ್ಮದ್ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಇವರೆಲ್ಲರು ನನ್ನ ಮೇಲೆ ನಂಬಿಕೆ ಇಟ್ಟು ಕೂಡಾ ಅಧ್ಯಕ್ಷರಾಗಿ ನನ್ನುನ್ನು ಆಯ್ಕೆ ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕೂಡಾ ಆಯುಕ್ತ ಶ್ರೀನಾಥ್, ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ ಹಾಲಿ ನಿರ್ದೇಶಕ ಶಂಷೀರ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ವಕ್ಕಲೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರುಳಿ ವಕ್ಕಲೇರಿ ರಾಜಪ್ಪ ,ಜಬೀಉಲ್ಲಾ ಚೋಟಾಸಾಬ್, ಮತ್ತಿತರರು ಉಪಸ್ಥಿತರಿದ್ದರು.