ವಿಜಯಪುರ:- ಮೊಹರಂ ಮೆರವಣಿಗೆಯಲ್ಲಿ ಅವಘಡ ಸಂಭವಿಸಿ, ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಜರುಗಿದೆ.
ವಿಜಯಪುರ ನಗರದ ಮೆಹತರ್ ಮಹಲ್ ಎದುರು ಘಟನೆ ನಡೆದಿದೆ.
ಹ್ಯಾಂಡ್ ಬ್ರೇಕ್ ಹಾಕದೇ ಚಾಲಕನ ಎಡವಟ್ಟು: ಕಂದಕಕ್ಕೆ ಬಿದ್ದ ಕಾರು, ಬೆಂಗಳೂರಿನ ಮೂವರು ಸಾವು!
ಇನಾಂದಾರ್(40) ಮೃತ ವ್ಯಕ್ತಿ ಎನ್ನಲಾಗಿದೆ. ಎದುರಿಗೆ ಬಂದ ಕಾರಿಗೆ ದಾರಿ ಬಿಡುವ ವೇಳೆ ಟ್ರಾನ್ಸ್ಫಾರ್ಮರ್ಗೆ ವಾಹನ ತಗುಲಿದೆ. ಈ ವೇಳೆ ಶಾಕ್ನಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮತ್ತೋರ್ವ ಸಾಧಿಕ್ ಎಂಬಾತನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಗೋಲಗುಂಬಜ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.