ಬೆಂಗಳೂರು:- ಜಮ್ಮು ಕಾಶ್ಮೀರದಲ್ಲಿ ಬೆಂಗಳೂರು ಮೂಲದ ಮೂವರ ಸಾವನ್ನಪ್ಪಿದ ಘಟನೆ ಜರುಗಿದೆ. ಪ್ರಪಾತಕ್ಕೆ ಕಾರು ಬಿದ್ದ ಪರಿಣಾಮ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟು, ಒಬ್ಬರಿಗೆ ಗಾಯಗಳಾಗಿದೆ.
ಒಂದೇ ಕುಟುಂಬದ ತಂದ್ರ ದಾಸ್(67), ಮೊನಾಲಿಸಾ ದಾಸ್(41), ಮತ್ತೊಬ್ಬ ಪುರುಷ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಬಾಲಕಿ ಅದ್ರಿತಾ ಖಾನ್(9)ಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೃತರು ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದಾರೆ. ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ದುರ್ಘಟನೆ ಸಂಭವಿಸಿದೆ. ಜಮ್ಮು ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಎದುರಿಗಿದ್ದ ಕಾರೊಂದು ಕೆಟ್ಟು ನಿಂತಿತ್ತು, ಈ ವೇಳೆ ಅದನ್ನು ನೋಡಲು ಚಾಲಕ ಕಾರಿನಿಂದ ಇಳಿದಿದ್ದನು. ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ, ಹೀಗಾಗಿ ಕಾರು ಪ್ರಪಾತಕ್ಕೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.