ನೆಲಮಂಗಲ: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
Hubballi: ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕಳ್ಳತನ; ಖದೀಮರು ಎಸ್ಕೇಪ್!
ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಪೊನ್ ಬಳಕೆಯಿಂದ ಗಂಡ ಬೇಸತ್ತು ಹೋಗಿದ್ದ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ರು ಹೆಂಡತಿ ಮಾತ್ರ ಶೋಕಿಯಲ್ಲಿದ್ದಳು. ಹೀಗಾಗಿ ಮನನೊಂದ ಪತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಘಟನೆ ಜರುಗಿದೆ. ಲಾರಿ ಚಾಲಕ ಗುಲ್ಜಾರ್ ಹುಸೈನ್ ಚೌಧರಿ ಮೃತ ವ್ಯಕ್ತಿ ಎನ್ನಲಾಗಿದೆ. ಅಸ್ಸಾಂ ಮೂಲಕ ಲಾರಿ ಚಾಲಕ ಮದುವೆ ನಂತರ ತೊಣಚಿನಕುಪ್ಪೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಗಂಡ ಹೆಂಡತಿ ನಡುವೆ ಸಾಕಷ್ಟು ಬಾರಿ ಗಲಾಟೆ ಮನನೊಂದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.