ಹುಬ್ಬಳ್ಳಿ :-ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕೀ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಕೇಶ್ವಾಪುರದ ರಮೇಶ ಭವನದ ಬಳಿ ನಡೆದಿದೆ.
ಹುಬ್ಬಳ್ಳಿಯ ಕೇಶ್ವಾಪುರದ ರಮೇಶ್ ಭವನದ ಬಳಿಯ ಭುವನೇಶ್ವರಿ ಜ್ಯುವೆಲರಿ ಶಾಪ್ ನ ಚಾವಿಯನ್ನು
ಗ್ಯಾಸ್ ಕಟ್ಟರ್ ನಿಂದ ತುಂಡು ಮಾಡಿದ್ದಾರೆ. ನಂತರ ಗ್ಲಾಸ್ ಒಡೆದು ಒಳನುಗ್ಗಿ ಕಳ್ಳರು 800 ಗ್ರಾಮ್ ಚಿನ್ನ ಮತ್ತು 50 ಕೆ.ಜಿ ಬೆಳ್ಳಿ ಕಳ್ಳತನ ಮಾಡಿದ್ದಾರೆ.
ಈ ಆಭರಣ ಅಂಗಡಿ ಜಗದೀಶ್ ದೈವಜ್ಞ ಎಂಬುವರಿಗೆ ಸೇರಿದ್ದಾಗಿದೆ. ಬೆಳಗಿನ ಜಾವ 2 ಗಂಟೆ ವೇಳೆಗೆ ನಡೆದಿರುವ ಸಾಧ್ಯತೆ ಇದೆ. ಮೊದಲು ಸಿಸಿ ಕ್ಯಾಮೆರಾಕ್ಕೆ ಸ್ಪ್ರೇ ಮಾಡಿ ನಂತರ ಕಳ್ಳತನ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ವ್ಯಕ್ತಿಗಳಿಂದ ಕಳ್ಳತನ ನಡೆದಿರೋ ಸಾಧ್ಯತೆಗಳಿವೆ. ಒಂದು ಸಿಸಿ ಕ್ಯಾಮೆರಾದಲ್ಲಿ ಇಬ್ಬರ ವ್ಯಕ್ತಿಗಳ ದೃಶ್ಯಗಳು ಸೆರೆಯಾಗಿವೆ. ಉಳಿದ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು
ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.