ಕಲಬುರಗಿ:- ಸೇತುವೆಯಿಂದ ನೀರಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ..
ಕಮಲಾಪುರ ತಾಲೂಕಿನ ಕುರಿಕೋಟಾ ಬಳಿ ಘಟನೆ ನಡೆದಿದ್ದು ಮೃತರನ್ನ ಅನೀಲ್ ಹಾಗು ಸಂಧ್ಯಾರಾಣಿ ಅಂತ ಗುರುತಿಸಲಾಗಿದೆ..ವಿಪರ್ಯಾಸ ಅಂದ್ರೆ ಪ್ರೇಮಿಗಳಿಬ್ಬರು ವಿವಾಹಿತರು ಎನ್ನಲಾಗಿದೆ..
ಹೆಂಡತಿಯನ್ನ ಕಳೆದುಕೊಂಡಿದ್ದ ಮುದ್ದಡಗಾ ನಿವಾಸಿ ಅನೀಲ್ ಪತಿಯಿಂದ ದೂರವಾಗಿದ್ದ ನಂದಿಕೂರ್ ಗ್ರಾಮದ ಸಂಧ್ಯಾರಾಣಿಯ ಜೊತೆ ಒಟ್ಟಿಗೆ ಬಾಳುತಿದ್ದ.. ಆದ್ರೆ ಸಾವಿಗೆ ಕಾರಣ ತಿಳಿದು ಬಂದಿಲ್ಲ.
.ಮಹಾಗಾಂವ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಸದ್ಯ ಅನೀಲ್ ಶವ ಪತ್ತೆಯಾಗಿದೆ..ಆದ್ರೆ ಯುವತಿ ಶವಕ್ಕಾಗಿ ಶೋಧ ಮುಂದುವರೆದಿದೆ..