ಬೆಂಗಳೂರು: ದೂರದ ಊರಿಂದ ಬಂದಿದ್ದ ಆತನಿಗೆ ಆ ಮನೆ ಮಾಲೀಕ ಕೆಲಸ ಕೊಟ್ಟಿದ್ದ.. ಇರೋಕೆ ಜಾಗ, ಊಟ ಕೊಟ್ಟು ಮನೆ ಮಗನಂತೆಯೇ ನೋಡಿಕೊಳ್ತಿದ್ದ.. ಎಷ್ಟರ ಮಟ್ಟಿಗೆ ಅಂದ್ರೆ ಇಡೀ ಮನೆ ಕೀಲಿಯೇ ಆತನ ಕೈಗೆ ಇಟ್ಟು ಹೊರ ರಾಜ್ಯಕ್ಕೆ ಹೋಗಿದ್ದ.. ಅಷ್ಟು ನಂಬಿಕೆ ಇಟ್ಟಿದ್ದ ಮನೆಗೆ ಕನ್ನಾ ಹಾಕಿದ್ದ ಖತರ್ನಾಕ್ ಕಳ್ಳ ಮತ್ತು ಸ್ನೇಹಿತರನ್ನ ಪೊಲೀಸ್ರು ಹೆಡೆಮುರಿ ಕಟ್ಟಿದಾರೆ..
ಬೆಂಗಳೂರಿನಲ್ಲಿ ದೊಡ್ಡ ಮನೆ, ಬಂಗಲೆ ಇದ್ರೆ ಆ ಮನೆಗೆ ಕೆಲಸ ಮಾಡೋರು ಬೇಕೇ ಬೇಕು.. ಖಾಲಿ ಕೈಲಿ ದುಡಿಯೋಕೆ ಬರೋರಿಗೆ ಇಂತಹ ಬಂಗಲೆಯವ್ರು ಕೆಲಸ, ಮನೆ ಕೊಡ್ತಾರೆ.. ಆದ್ರೆ ಅಂತಹ ಮನೆ ಮಾಲೀಕರಿಗೆ ಕೆಲವರು ಎರಡು ಬಗಿತಾರೆ.. ಅದೇ ರೀತಿಯ ಘಟನೆಯೊಂದು ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಕೆಲಸ ಅಂತಾ ಊಟಿಗೆ ಹೋಗಿದ್ದ ಮನೆ ಮಾಲೀಕನೊಬ್ಬ ತನ್ನ ಗಾರ್ಡನ್ ನ ಕೆಲಸದಾತನಿಗೆ ಕೀ ಕೊಟ್ಟು ಹೋಗಿದ್ದ.. ಬರೋಷ್ಟ್ರಲ್ಲಿ ಆ ಮನೆಯನ್ನೇ ಗುಡಿಸಿ ಗುಂಡಾತರ ಮಾಡಿದ್ದ ಕಳ್ಳ ಕೆಲಸಗಾರನನ್ನ ಪೊಲೀಸರು ಬಂಧಿಸಿದ್ದಾರೆ..
ರೀಲ್ಸ್ ನೋಡಿ ಕಾರ್ ಖರೀದಿ ಮಾಡೋ ಮುನ್ನ ಎಚ್ಚರ: ನಕಲಿ ದಾಖಲೆ ಸೃಷ್ಠಿ ಮಾಡಿ ಮಾರಾಟ!
ಅಂದ್ಹಾಗೆ ಈ ಘಟನೆ ನಡೆದಿದ್ದು ಕಳೆದ 12 ನೇ ತಾರೀಖು.. ಅಜಿತ್ಚಮುಖ್ಯ ಟೀ ಎಸ್ಟೇಟ್ ಮಾಲೀಕರೊಬ್ಬರ ಮನೇಲಿ ರಾಜೇಂದ್ರ ಎಂಬ ಬೇರೆ ರಾಜ್ಯದಾತ ಕೆಲಸ ಮಾಡ್ತಿದ್ದ.. ಸ್ಯಾಂಕಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಮಾಲೀಕ ಭರಾಜೇಂದ್ರನಿಗೆ ಅಡಿಗೆ ಭಟ್ಟನ ಕೆಲಸ ಕೊಟ್ಟಿದ್ದ ಮನೆ ಮಾಲೀಕರು ಆತನನ್ನ ನಂಬಿ ಒಳ್ಳೆ ಸಂಬಳ, ಮನೆ ಕೊಟ್ಟು ನೋಡಿಕೊಳ್ತಿದ್ರು.. ಆತನನ್ನ ಕಂಪ್ಲೀಟಾಗಿ ನಂಬಿದ್ದ ಮನೆ ಮಾಲೀಕರು ಕೆಲಸದ ಮೇಲೆ ಊಟಿಗೆ ಹೋಗಿದ್ರು.. ಇಡೀ ಫ್ಯಾಮಿಲಿ ಹೋಗಿರೋದ್ರಿಂದ ಮನೆ ನೋಡಿಕೊಳ್ಳೋಕೆ ಅಂತಾ ಭಟ್ಟ ರಾಜೇಂದ್ರನನ್ನ ಬಿಟ್ಟಿದ್ರು.. ಬರೀ ಮನೆ ನೋಡ್ಕೊಂಡಿರಪ್ಪಾ ಅಂದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ವೇನೋ.. ಮನೆ ಕೀ ಕೂಡ ಆತನ ಕೈಗೆ ಇಟ್ಟು ಮಾಲೀಕ ಊಟಿಗೆ ಹೋಗಿದ್ರು.. ಆದ್ರೆ ಮನೆ ಕೆಲಸ ಮಾಡ್ತಿದ್ದ ರಾಜೇಂದ್ರ ಅಷ್ಟೇ ನಂಬಿಕಸ್ಥರ ಇರ್ಬೇಕಲ್ಲ..
ಮೊದಲೇ ಮನೇಲಿದ್ದ ಚಿನ್ನಾಭರಣ, ಬೆಳ್ಳಿ, ಹಣ ಎಲ್ಲವನ್ನೂ ನೋಡಿಕೊಂಡಿದ್ದಾತ ಇದೇ ಒಳ್ಳೆ ಟೈಮು ಅಂತಾ ತನ್ನ ಸ್ನೇಹಿತರಾದ ಶರವಣ್ ಹಾಗೂ ರಾಜುಮುಖ್ಯ ಎಂಬ ಇಬ್ಬರನ್ನ ಕರೆಸಿ ಇಡೀ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿ ಬಿಹಾರಕ್ಕೆ ಎಸ್ಕೇಪ್ ಆಗಿದ್ರು.. ಊಟಿಯಿಂದ ಮನೆಗೆ ಬಂದಿದ್ದೇ ತಡ ಮಾಲೀಕ ಮನೆಯ ಪರಿಸ್ಥಿತಿ ನೋಡಿ ಶಾಕ್ ಆಗಿ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ರು.. ಕೂಡಲೇ ತನಿಖೆ ನಡೆಸಿದ್ದ ಪೊಲೀಸ್ರು ಮೂವರನ್ನೂ ಬಿಹಾರದಲ್ಲಿ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ..
ಸದ್ಯ ಮೂವರನ್ನೂ ಬಂಧಿಸಿರೋ ಪೊಲೀಸರು ಅವ್ರನ್ನ ಜೈಲಿಗಟ್ಟಿದ್ದಾರೆ.. ಪೊಲೀಸರ ಕಾರ್ಯಕ್ಕೆ ಮೆಚ್ಚಿ ನಗರ ಪೊಲೀಸ್ ಆಯುಕ್ತರು ತನಿಖಾ ತಂಡಕ್ಕೆ ಬಹುಮಾನ ಘೋಷಣೆ ಮಾಡಿದ್ದಾರೆ..