ಇದೇ ಮೊದಲ ಬಾರಿ ಟೀಮ್ ಇಂಡಿಯಾ ಕ್ಯಾಪ್ಟನ್ಸಿ ವಹಿಸಿಕೊಂಡಿದ್ದ ಯುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಜಿಂಬಾಬ್ವೆ ಪ್ರವಾಸದಲ್ಲಿ ನಡೆದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ 4-1 ಅಂತರದ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಅಂದು ಹಾಲು ಮಾರುತ್ತಿದ್ದ ಹುಡುಗ ಇಂದು ಚಾಂಪಿಯನ್: ರೋಹಿತ್ ಶರ್ಮಾ ರೋಚಕ ಜರ್ನಿ
ಕ್ಯಾಪ್ಟನ್ಸಿ ಅಭಿಯಾನದಲ್ಲಿ ಶುಭಾರಂಭ ಮಾಡಿರುವ ಶುಭಮನ್ ಗಿಲ್, ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಿಂದ ಸ್ಪೂರ್ತಿ ಪಡೆದಿದ್ದು ಎನ್ನುತ್ತಾರೆ, ಕ್ಯಾಪ್ಟನ್ಸಿ ಜವಾಬ್ದಾರಿಯಲ್ಲಿ ಎದುರಾಗುವ ಒತ್ತಡ ಮತ್ತು ತಂಡದ ಸಹ ಆಟಗಾರರನ್ನು ನಿರ್ವಹಿಸುವ ಬಗ್ಗೆ ತಮ್ಮ ಅನುಭವ ಅನುಭವ ಹಂಚಿಕೊಂಡಿದ್ದಾರೆ. ಸರಣಿ ಆರಂಭದಲ್ಲಿ ಎದುರಾದ ಸೋಲಿನಿಂದ ಒತ್ತಡಕ್ಕೆ ಒಳಗಾದ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೂ ಸರಣಿ ಮುಕ್ತಾಯಗೊಂಡ ಪರಿ ತೃಪ್ತಿ ತಂದುಕೊಟ್ಟಿದೆ ಎಂದಿದ್ದಾರೆ
“ನಾಯಕತ್ವದ ವಿಚಾರದಲ್ಲಿ ವಿರಾಟ್ ಭಾಯ್, ಹಾರ್ದಿಕ್ ಭಾಯ್ ಮಾಹಿ ಭಾಯ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ರೋಹಿತ್ ಭಾಯ್ ಮಾದರಿ ತಂಡವನ್ನು ಮುನ್ನಡೆಸಲು ಎದುರು ನೋಡುತ್ತಿದ್ದೇನೆ. ಎಲ್ಲರ ಕ್ಯಾಪ್ಟನ್ಸಿಯಿಂದಲೂ ಕೆಲ ಅಂಶಗಳನ್ನು ತೆಗೆದುಕೊಂಡಿದ್ದೇನೆ. ಆದರೆ, ನಾನು ಆಡಿರುವುದು ಹೆಚ್ಚಾಗಿ ರೋಹಿತ್ ಅವರ ನಾಯಕತ್ವದ ಅಡಿಯಲ್ಲಿ. ಹೀಗಾಗಿ ಅವರ ನಾಯಕತ್ವದ ಗುಣಗಳು ನನ್ನ ಮೇಲೆ ಹೆಚ್ಚು ಪರಿಣಾಮ ಬೀರಿದೆ.