16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವಣ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಾಸ್ಟ್ ಬೌಲರ್ ನವೀನ್ ಉಲ್ ಹಕ್ ವಿರುದ್ಧ ತೆಗೆದ ಕಿರಿಕ್ ಕುರಿತಾಗಿ ಮಾತನಾಡಿದ್ದಾರೆ.
ಅಂದು ಹಾಲು ಮಾರುತ್ತಿದ್ದ ಹುಡುಗ ಇಂದು ಚಾಂಪಿಯನ್: ರೋಹಿತ್ ಶರ್ಮಾ ರೋಚಕ ಜರ್ನಿ
39 ವರ್ಷದ ಕ್ರಿಕೆಟಿಗ ಅಮಿತ್ ಮಿಶ್ರಾ, ಆರ್ಸಿಬಿ ಮತ್ತು ಎಲ್ಎಸ್ಜಿ ನಡುವಣ ನಡೆದ ಪಂದ್ಯದಲ್ಲಿ ಸಂಭವಿಸಿದ ಜಗಳದಲ್ಲಿ ವಿರಾಟ್ ಕೊಹ್ಲಿ ಅವರದ್ದೇ ತಪ್ಪು ಎಂದಿದ್ದಾರೆ. ಫಾಸ್ಟ್ ಬೌಲರ್ ನವೀನ್ ಉಲ್ ಹಕ್ ಎದುರು ವಿರಾಟ್ ಕೊಹ್ಲಿ ಅನಗತ್ಯ ಜಗಳ ತೆಗದ ಕಾರಣಕ್ಕೆ ತಂಡದ ಮೆಂಟರ್ ಗೌತಮ್ ಗಂಭೀರ್ ಮಧ್ಯ ಪ್ರವೇಶ ಮಾಡಿದ್ದರು ಎಂದಿದ್ದಾರೆ. ಆ ಜಗಳದ ಬಳಿಕ ವಿರಾಟ್ ಮತ್ತು ಗಂಭೀರ್ ಇಬ್ಬರ ವಿರುದ್ಧ ಬಿಸಿಸಿಐ ಶೇ. 100 ರಷ್ಟು ಮ್ಯಾಚ್ ಫೀ ಅನ್ನು ದಂಡವಾಗಿ ವಿಧಿಸಿತು.
ಆ ಜಗಳಕ್ಕೂ ಹಿಂದಿನ ಪಂದ್ಯದಲ್ಲಿ ಡಗ್ಔಟ್ನಲ್ಲಿ ಗೌತಮ್ ಗಂಭೀರ್ ಸ್ವಲ್ಪ ತಮ್ಮ ಭಾವನೆಗಳನ್ನು ಹೊರಹಾಕಿದ್ದರು. ಅವೇಶ್ ಖಾನ್ ಹೆಲ್ಮೆಟ್ ಎಸೆದು ಸಂಭ್ರಮಿಸಿದ್ದರು. ಆದರೆ, ನಂತರದ ಪಂದ್ಯಕ್ಕೂ ವಿರಾಟ್ ಕೊಹ್ಲಿ ಈ ವಿಚಾರವನ್ನು ಕೊಂಡೊಯ್ದಿದ್ದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆ ಪಂದ್ಯದಲ್ಲಿ ಎಲ್ಎಸ್ಜಿ ಆಟಗಾರರನ್ನು ಬೈಯಲು ಕೊಹ್ಲಿ ಶುರು ಮಾಡಿದ್ದರು. ಗಂಭೀರ್ ಮಧ್ಯ ಪ್ರವೇಶಕ್ಕೆ ಇದೇ ಕಾರಣವಾಯಿತು,” ಎಂದು ಮಿಶ್ರಾ ಹೇಳಿದ್ದಾರೆ.