ಕೋಲಾರ ; ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಕೈವಾರದಲ್ಲಿ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಗುರುಪೂರ್ಣಿಮಾ ಪ್ರಯಕ್ತ ಜುಲೈ 19 ರಿಂದ 3 ದಿನಗಳವರೆಗೆ ಗುರುಪೂಜಾ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಗಿದೆ ಎಂದು ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದ್ರು.
Basanagowda Patil Yatnal: ಶಾಸಕ ಯತ್ನಾಳ್ಗೆ ಕೋರ್ಟ್ನಿಂದ ನೋಟಿಸ್: ಯಾಕೆ ಗೊತ್ತಾ!?
ನಗರದ ಪತ್ತಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಚಿಂತಾಮಣಿ ತಾಲೂಕಿನ ಕೈವಾರ ಮಠದಲ್ಲಿ ಸದ್ಗುರು ತಾತಯ್ಯನವರಿಗೆ ಗುರುಪೂಜೆಯ ಅಂಗವಾಗಿ ರಾಷ್ಟ್ರಮಟ್ಟದ ಸಂಗೀತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರು ಮತ್ತು ಸಹಸ್ರಾರು ಕಲಾತಂಡಗಳು ಭಾಗವಹಿಸಲಿದ್ದು 72 ಗಂಟೆಗಳ ನಿರಂತರ ಸಂಗೀತ ಸೇವೆ ನಡೆಯಲಿದೆ ಎಂದು ತಿಳಿಸಿದ್ರು.
ಪಿಜೆ ಬ್ರಹ್ಮಚಾರಿ ತಂಡದವರಿಂದ ಪಿಟೀಲು ಸೋಲೋ , ಡಿ ಆರ್ ರಾಜಪ್ಪ ತಂಡದವರಿಂದ ಗಾಯನ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು.