ಉಡುಪಿ: ಬಾರ್ ಮಾಲೀಕರ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಉಡುಪಿಯ ಅಂಬಲಪಾಡಿಯ ಗಾಂಧಿನಗರದಲ್ಲಿ ನಡೆದಿದೆ. ಈ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಇವರ ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಕುರಿತು ವರದಿಯಾಗಿದೆ. ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ನ ಮಾಲೀಕರಾಗಿರುವ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,
Pomegranate Juice: ದಿನಕ್ಕೊಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಈ ಕಾಯಿಲೆಗಳು ಹತ್ತಿರವೂ ಸುಳಿಯಲ್ಲ!
ಬೆಂಕಿ ತೀವ್ರವಾಗಿ ಹಬ್ಬಿ ಪ್ರಜ್ಞೆ ತಪ್ಪಿದ್ದ ಗಂಡ ಹೆಂಡತಿಯನ್ನು ಅಗ್ನಿಶಾಮಕ ಸಿಬ್ಬಂದಿಯವರು ರಕ್ಷಣೆ ಮಾಡಿದ್ದರು. ಇವರಿಬ್ಬರಿಗೆ ಈ ಅವಘಡದಲ್ಲಿ ತೀವ್ರವಾದ ಗಾಯವಾಗಿದ್ದವು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಬಾರ್ ಮಾಲೀಕರ ರಮಾನಂದ ಅವರು ಚಿಕಿತ್ಸೆ ಫಲಕಾರಿಯಾಗದೆ, ಮೃತ ಹೊಂದಿದ್ದು, ಇವರ ಪತ್ನಿ ಅಶ್ವಿನಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ.