ಡುವ , ವಿವಾಹವಾಗಿ ಬಿಂದಾಸ್ ಬದುಕು ಕಟ್ಟಿಕೊಳ್ಳೋದು. ಬಹುತೇಕ ಎಲ್ಲ ಯುವತಿಯರ ಕನಸು. ಆದರೆ, ಆ ಕನಸು ನನಸು ಮಾಡಿಕೊಳ್ಳೋದಾದ್ರೂ ಹೇಗೆ ? ಅಂತಹಾ ಯುವತಿಯರಿಗೆ ಪ್ರೇಮಪಾಠ ಹೇಳಿಕೊಡುವುದಕ್ಕಾಗಿಯೇ ಚೀನಾದಲ್ಲಿ ಪ್ರೇಮಶಾಲೆಯೊಂದನ್ನು ಪ್ರಾರಂಭಿಸಲಾಗಿದೆ. ಈ ಪ್ರೇಮ ಶಾಲೆಯನ್ನು ಪ್ರಾರಂಭ ಮಾಡಿರೋದು ಚುವಾಂಕು ಎಂಬಾಕೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಚುವಾಂಕು, ಪ್ರೇಮಗುರು ಅಂತಲೇ ಫೇಮಸ್. ಈಕೆಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಗಳಿದ್ದಾರೆ.
King Kohli: ಎಲ್ಲರೂ ಅನಂತ್ ಅಂಬಾನಿ ಮದುವೆಗೋದ್ರೂ, ಆದ್ರೆ ಕೊಹ್ಲಿ ಹೋಗಿದ್ದೆಲ್ಲಿ ಗೊತ್ತಾ!?
ಅಂದಹಾಗೆ ಈಕೆಯಿಂದ ಪ್ರೇಮ ಪಾಠ ಹೇಳಿಸಿಕೊಳ್ಳಬೇಕಾದರೆ ನೇರವಾಗಿ ಆಕೆಯ ಶಾಲೆಗೆ ಹೋಗಬೇಕು ಅಂತಾ ಕಡ್ಡಾಯವೇನಿಲ್ಲ. ಆನ್ ಲೈನ್ ಕ್ಲಾಸ್ ಬೇಕಾದ್ರೂ ತೆಗೆದುಕೊಳ್ಳಬಹುದು. ಆನ್ ಲೈನ್ ನಲ್ಲೇ ಡೇಟಿಂಗ್ ಸಲಹೆಗಳು, ವೈಯಕ್ತಿಕ ಸಮಾಲೋಚನೆ ಸೇರಿದಂತೆ ವಿವಿಧ ಬಗೆಯ ಕೋರ್ಸ್ ಗಳನ್ನೂ ಸಹ ನಡೆಸುತ್ತಿದ್ದಾಳೆ. ಪ್ರತಿಯೊಂದಕ್ಕೂ ಸಪರೇಟ್ ರೇಟ್ ಫಿಕ್ಸ್ ಮಾಡಲಾಗಿದೆ. ಲೈವ್ ಸ್ಟ್ರೀಮ್ ನಲ್ಲಿ ಒಂದು ಸಲಹೆಗೆ ಈಕೆ 12,945 ರೂಪಾಯಿ ಚಾರ್ಜ್ ಮಾಡುತ್ತಾಳೆ. ಅದೇ ರೀತಿ ಮೌಲ್ಯಯುತ ಸಂಬಂಧಗಳ ಪಾಠಕ್ಕೆ 43,179 ರೂಪಾಯಿ, ವೈಯಕ್ತಿಕ ಸಮಾಲೋ ಚನೆಗಾಗಿ ತಿಂ ಗಳಿಗೆ 1,16,927 ರೂ., ಪಡೆದುಕೊಳ್ಳುತ್ತಾಳೆ. ಈ ರೀತಿ ಹೆಣ್ಮಕ್ಕಳಿಗೆ ಪ್ರೇಮ ಪಾಠ ಹೇಳಿಕೊಟ್ಟೇ ಈ ಪ್ರೇಮಗುರು ಚುವಾಂಕು ವಾರ್ಷಿಕ ಸುಮಾರು 163 ಕೋಟಿ ರೂಪಾಯಿ ವರಮಾನ ಗಳಿಸುತ್ತಿದ್ದಾಳೆ. ಚುವಾಂಕು ಹೇಳಿಕೊಡುವ ಪಾಠಗಳು ಸ್ವಲ್ಪ ಕಾಸ್ಟ್ಲಿ ಅನ್ನಿಸಿದ್ರೂ ಸಹ, ಇದು ಒಂದು ರೀತಿಯಲ್ಲಿ ಆರಂಭಿಕ ಹೂಡಿಕೆ ಇದ್ದಂತೆ ಅಲ್ವಾ. ಒನ್ ಟೈಮ್ ಚುವಾಂಕುಗೆ ಒಂದಿಷ್ಟು ಅಮೌಂಟ್ ಕೊಟ್ಟು, ಪ್ರೇಮಪಾಠ ಕಲಿತು, ಆಗರ್ಭ ಶ್ರೀಮಂತ ಹುಡುಗನಿಗೆ ಗಾಳ ಹಾಕಿ, ಮದುವೆ ಮಾಡಿಕೊಂಡರೆ ಲೈಫ್ ಟೈಮ್ ಆರಾಮ ಅಲ್ವಾ. ಅದಕ್ಕೇನೆ, ಚೀನಾದ ಹೆಣ್ಮಕ್ಕಳೆಲ್ಲಾ ಚುವಾಂಕು ಹತ್ತಿರ ಪ್ರೇಮಪಾಠ ಹೇಳಿಸಿಕೊಳ್ಳೋದಕ್ಕೆ ಮುಗಿಬೀಳುತ್ತಿದ್ದಾರಂತೆ.
ಇದೇ ವೇಳೆ ಚುವಾಂಕು ಪವಿತ್ರವಾದ ಮದುವೆ ಸಂಬಂಧವನ್ನು, ಆರ್ಥಿಕ ವ್ಯವಹಾರದ ರೀತಿಯಲ್ಲಿ ನೋಡದನ್ನು ಮಹಿಳೆಯರಿಗೆ ಕಲಿಸುತ್ತಿರುವುದಕ್ಕೆ ಹಲವಾರು ಮಂದಿ ಕೋಪ ಮಾಡಿಕೊಂಡಿದ್ದಾರೆ. ಇದು ಅನೈತಿಕ ಅಂತಾ ಅಸಮಾಧಾನ ವ್ಯಕ್ತಪಡಿಸುವವರೂ ಇದ್ದಾರೆ. ಆದರೆ, ಚುವಾಂಕು ಮಾತ್ರ ಆ ಯಾವುದೇ ಟೀಕೆಗಳಿಗೂ ತಲೆ ಕೆಡಿಸಿಕೊಳ್ಳುತ್ತಿಲ್ಲ.” ನನ್ನ ವೀಡಿಯೋಗಳಲ್ಲಿನ ಪಾಠಗಳು ಮಹಿಳೆಯರು ಉತ್ತಮ ಸಂಬಂಧಗಳನ್ನು ಹೊಂದಲು ಕಾರಣವಾಗಿದೆ. ಅವು ಲಾಭದಾಯಕವಾಗಿವೆ. ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಿವೆ. ಅವರನ್ನು ಸಬಲೀಕರಣಗೊಳಿಸಲು ಸಹಕಾರಿಯಾಗಿವೆ ” ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಒಂದು ಹಂತದಲ್ಲಿ ಚುವಾಂಕು ವಿರುದ್ದ ಜನಾಕ್ರೋಶ ಹೆಚ್ಚಾಗಿತ್ತು. ಆಗ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ವೈಬೋದಲ್ಲಿ ಆಕೆಯನ್ನು ನಿಷೇಧಿಸಲಾಗಿತ್ತು. ಆದರೇನು, ಚುವಾಂಕು ಎದೆಗುಂದಲಿಲ್ಲ. ಎಐ ತಂತ್ರಜ್ಞಾ ನ, ಗ್ರಾಹಕರ ನೇರ ಸಂವಹನ ಮತ್ತು ವೈಯಕ್ತಿಕ ಚಾನಲ್ಗಳನ್ನು ಬಳಸಿಕೊಂಡು ತನ್ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು ಇನ್ನೂ ಹೆಚ್ಚು ಮಂದಿಯನ್ನು ತಲುಪುತ್ತಿದ್ದಾಳೆ.