ಕೇರಳ: ಕೇರಳ ಕಣ್ಣೂರು ಜಿಲ್ಲೆಯ ಛೆಂಗಲೈ ಎಂಬಲ್ಲಿ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿ ಇದ್ದ ರಬ್ಬರ್ ತೋಟದಲ್ಲಿ ಇಂಗು ಗುಂಡಿಯನ್ನು ತೆಗೆಯುತ್ತಿದ್ದಾಗ ಈ ಅಪರೂಪದ ನಿಧಿ ಕಾರ್ಮಿಕರಿಗೆ ಸಿಕ್ಕಿದೆ. ಆರಂಭದಲ್ಲಿ ಹೊಳೆಯುತ್ತಿದ್ದ ಈ ನಿಧಿಯನ್ನು ನೋಡಿದ ಕಾರ್ಮಿಕರು ಬಾಂಬ್ ಆಗಿರಬಹುದು ಎಂದು ಆತಂಕಗೊಂಡಿದ್ದಾರೆ. ಆದರೆ ನಿಧಿ ಇದ್ದ ಮಡಕೆ ಒಡೆದಾಗ ಅದರಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು ಇರುವುದು ಗೊತ್ತಾಗಿದೆ.
Vaastu Tips: ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಲಕ್ಷ್ಮಿ ಕೃಪೆ ಸಿಗುತ್ತಂತೆ!
ಇದರಲ್ಲಿ ಒಟ್ಟು 177 ಮುತ್ತಿನ ಮಣಿಗಳು, 13 ಚಿನ್ನದ ಪದಕಗಳು, ಹಾಗೂ ಕಾಶಿ ಮಾಲಾ ಎಂದು ಕರೆಯಲಾಗುವ ಸಾಂಪ್ರದಾಯಿಕ ಆಭರಣದ ಭಾಗವೆಂದು ನಂಬಲಾಗಿರುವ ಇನ್ನೂ 4 ಪದಕಗಳು ಸಿಕ್ಕಿವೆ. ಇದರ ಜೊತೆಗೆ ಕಿವಿಯೋಲೆ ಉಂಗುರ ಹಾಗೂ ಬೆಳ್ಳಿ ನಾಣ್ಯಗಳ ಒಂದು ಸೆಟ್ ಪತ್ತೆಯಾಗಿದೆ. ಮಳೆನೀರಿನ ಮರುಪೂರಣಕ್ಕಾಗಿ ಹೊಂಡ ತೋಡುತ್ತಿದ್ದ ಕಾರ್ಮಿಕರಲ್ಲಿ ಒಬ್ಬರಾದ ಆಯೇಷಾ ಎಂಬುವವರಿಗೆ ಇದು ಮೊದಲಿಗೆ ಕಾಣಿಸಿದೆ.