ಬೆಂಗಳೂರು:- ಸರ್ಕಾರಿ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ.
ಅಕ್ರಮ ಒತ್ತುವರಿದಾರರು ಸುಮಾರು 5.5 ಕೋಟಿ ಮೌಲ್ಯದ ಬಂಡಿದಾರಿ ಜಾಗ ಒತ್ತುವರಿ ಮಾಡಿದ್ದರು. ಸರ್ವೆ ನಂ.134/5 ರಲ್ಲಿನ ಸರ್ಕಾರಿ ಬಂಡಿದಾರಿ ಜಾಗದಲ್ಲಿ ಈ ಹಿಂದಿನಿಂದಲೂ ವಾಹನಗಳು ಸಂಚರಿಸಲು ಅವಕಾಶ ಇತ್ತು. ಬಿ. ರಾಮಚಂದ್ರ ನಾಯ್ಡು ಎಂಬುವವರು ರಸ್ತೆಯನ್ನು ಆತಿಕ್ರಮಿಸಿ ಅಡ್ಡಲಾಗಿ ಕಬ್ಬಿಣದ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದರು.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಇಂದು ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಸಮ್ಮತಿ!
ಮಾಹಿತಿ ತಿಳಿದ ಬಂಡಿದಾರಿ ಜಾಗ ಅತಿಕ್ರಮಣವನ್ನು ತೆರವುಗೊಳಿಸಿ ಪಾಲಿಕೆ ವಶಪಡಿಸಿಕೊಂಡಿದೆ. ಮಹದೇವಪುರ ವಲಯದ ವೈಟ್ಫೀಲ್ಡ್ ನ ಪಟ್ಟಂದೂರು ಅಗ್ರಹಾರದಲ್ಲಿ ಭೂಗಳ್ಳರು ಒತ್ತುವರಿ ಮಾಡಿದ್ದರು. ಗ್ರಾಮದಲ್ಲಿ ಸುಮಾರು 503 ಚ.ಮೀ ವಿಸ್ತೀರ್ಣದ 5.35 ಕೋಟಿ ರೂ. ಮೌಲ್ಯದ ಸರ್ಕಾರಿ ಬಂಡಿದಾರಿ ಜಾಗ ಒತ್ತುವರಿ ಮಾಡಿಕೊಳ್ಳಲಾಗಿತ್ತು.
ಪಾಲಿಕೆ ಅಧಿಕಾರಿಗಳಿಂದ ಒತ್ತುವರಿ ತೆರವುಗೊಳಿಸಿ ಬಿಬಿಎಂಪಿ ವಶಕ್ಕೆ ಪಡೆಯಲಾಗಿದೆ. ಅತಿಕ್ರಮ ಮಾಡಿದ್ದ ಭೂ ಗಳ್ಳರ ವಿರುದ್ದ ದೂರು ದಾಖಲಿಸಿ ಪಾಲಿಕೆ ಕ್ರಮಕ್ಕೆ ಮುಂದಾಗಿದೆ.