ಬೆಂಗಳೂರು: ಅದು ಗ್ರಾಮಸ್ಥರ ಪಾಲಿನ ಆರಾಧ್ಯ ದೇವಿ ಶ್ರೀ ಓಂ ಶಕ್ತಿ ತಾಯಿ ದೇವಾಲಯ.. ಪ್ರತಿನಿತ್ಯ ಗ್ರಾಮದ ನೂರಾರು ಮಂದಿ ಹೆಣ್ಣು ಮಕ್ಕಳು ದೇವಾಲಯಕ್ಕೆ ಆಗಮಿಸಿ ತಾಯಿಯನ್ನ ಪೂಜಿಸುತ್ತಾರೆ. ಆದ್ರೆ ಇತ್ತೀಚೆಗೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಪುಂಡರು ಮಧ್ಯಪಾನ ಮಾಡಿ ಬಾಟಲಿಗಳನ್ನ ಹೊಡೆದು ಮಹಿಳೆಯರಿಗೆ ತೊಂದರೆ ನೀಡುತ್ತಿದ್ದಾರೆ. ಮಾತ್ರವಲ್ಲ ದೇವರ ವಿಗ್ರಹಗಳಿಗೂ ಹಾನಿ ಮಾಡುತ್ತಿದ್ದು ಪುಂಡರಿಂದ ರಕ್ಷಣೆ ನೀಡುವಂತೆ ಮಹಿಳೆಯರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇಂತಹುದೊಂದೆ ಘಟನೆ ನಡೆದಿದ್ದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ..
Road Accident: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ದುರ್ಮರಣ!
ಮಹಿಳೆಯರಿಗೆ ರಕ್ಷಣೆ ನೀಡುವಂತೆ,ಮತ್ತು ದೇವಸ್ಥಾನದ ಸುತ್ತ ಸುರಕ್ಷತೆ ಗಾಗಿ ನಿರ್ಮಾಣ ಮಾಡಿದ್ದ ಕಾಂಪೌಂಡ್ ತೆರವು ಮಾಡದಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರು ಎಲ್ಲ ದೃಶ್ಯ ಕಂಡು ಬಂದಿದ್ದು ,ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ , ಇಲ್ಲಿನ ಓಂ ಶಕ್ತಿ ದೇವಾಲಯದಲ್ಲಿ .. ಹೌದು ಇತ್ತೀಚಿಗೆ ಕಿಡಿಗೇಡಿಗಳ ಅಟ್ಟಹಾಸ ಹೆಚ್ಚಾಗಿದೆ, ಹೀಗಾಗಿ ಎಲ್ಲರೂ ಸಹಾಯ ಪಡೆದು ಕಾಂಪೌಂಡನ ನಿರ್ಮಾಣ ಮಾಡಿದ್ದು , ಈಗ ಕಂದಾಯ ಅಧಿಕಾರಿಗಳು ಸರ್ಕಾರಿ ಜಾಗ ಅಂತ ತೆರವು ಮಾಡಿದ್ದಾರೆ ಸಾಹುಕಾರ್ ಶಾಮಣ್ಣ ಎನ್ನುವರು ದಾನ ನೀಡಿದರು ಇದನ್ನ ಅನಾದಿಕಾಲದಿಂದಲೂ ಪೂಜೆ ಮಾಡಿಕೊಂಡು ಬರಲಾಗಿತ್ತು ಪಕ್ಕದಲ್ಲಿ ಮುನೇಶ್ವರ ದೇವಸ್ಥಾನ ಇದೆ ತಾಸಿಲ್ದಾರ್ ಆದೇಶ ಇದೆ ಕಾಂಪೌಂಡ್ ತೆರವು ಮಾಡಲಾಗಿದೆ ಎನ್ನುತ್ತಿದ್ದಾರೆ ..ಇನ್ನು ರಾತ್ರಿ ದೇವಾಲಯ ಬಾಗಿಲು ಹಾಕಿದ ಬಳಿಕ ಅಶ್ವತ ಕಟ್ಟೆ ಪುಂಡರು ಮಧ್ಯಪಾನ ಮಾಡಿ ಬಾಟಲಿಗಳನ್ನ ಒಡೆದು ಮಹಿಳೆಯರಿಗೆ ತೊಂದರೆ ನೀಡುತ್ತಿದ್ದಾರೆ. ಮುಂಜಾನೆ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಇದರಿಂದ ತೀವ್ರ ಅನಾನುಕೂಲ ಉಂಟಾಗುತ್ತಿದೆ. ಇಲ್ಲಿನ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಗೆ ಹಲವು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಅಂತ ಮಹಿಳೆಯರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಮಹಿಳೆಯರು ಹಣ ಒಟ್ಟುಗೂಡಿಸಿ ದೇವಾಲಯದ ಪಕ್ಕದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಆದರೆ ಅತ್ತಿಬೆಲೆಯ ಕಂದಾಯ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಪೌಂಡ್ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಂದು ಕಡೆ ಪೊಲೀಸರು ಸಹ ಪುಂಡರ ವಿರುದ್ದ ಕ್ರಮ ಜರುಗಿಸುತ್ತಿಲ್ಲ. ಮತ್ತೊಂದು ಕಡೆ ಪುಂಡರನ್ನ ನಿಯಂತ್ರಿಸಲು ನಿರ್ಮಾಣ ಮಾಡಿರುವ ಕಾಂಪೌಂಡ್ ತೆರವು ಮಾಡವಂತೆ ಅಧಿಕಾರಿಗಳು ಸೂಚನೆ ನೀಡಿರುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ದೇವಾಲಕ್ಕೆ ಬರುವ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಪುಂಡರ ಮಿತಿಮೀರಿದ ಹಾವಳಿಗೆ ಮಹಿಳೆಯರು ಕಂಗಾಲಾಗಿದ್ದು, ಸಂಬಂಧಪಟ್ಟ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದ ಗಮನಹರಿಸಿ ಮಹಿಳೆಯರ ರಕ್ಷಣೆಗೆ ಮುಂದಾಗುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.