ಬೆಂಗಳೂರು:– ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಮನೆ ಬಾಡಿಗೆ ಕಡಿಮೆಯಾಗುತ್ತಿದೆ. ಕೇವಲ ಮನೆ ಬಾಡಿಗೆ ಹೆಚ್ಚಳದ ಸುದ್ದಿಯನ್ನೇ ಕೇಳುತ್ತಿದ್ದ ಸಾರ್ವಜನಿಕರು ಇದೀಗ ಕೊಂಚ ಸಮಾಧಾನಪಡಬಹುದಾಗಿದೆ.
Eye Health: ನಿಮ್ಮ ಕಣ್ಣಿನ ದೃಷ್ಟಿ ಚುರುಕುಗೊಳ್ಳಬೇಕೇ? ಈ ಆಹಾರಗಳನ್ನು ಪ್ರತಿದಿನ ಸೇವಿಸಿ ಸಾಕು!
ಬೆಂಗಳೂರಿನಲ್ಲಿ ವಿಶೇಷವಾಗಿ ಬೇಡಿಕೆಯಿರುವ ಕೋರಮಂಗಲದಂತಹ ಪ್ರದೇಶಗಳಲ್ಲಿ ಮನೆ ಬಾಡಿಗೆ ತಿಂಗಳಿಗೆ 10,000-15,000 ರೂ.ಗಳಷ್ಟು ಕಡಿಮೆಯಾಗುತ್ತಿದೆ.
ಕೋರಮಂಗಲದ 3BHK ಅಪಾರ್ಟ್ಮೆಂಟ್ ಒಂದಕ್ಕೆ ತಿಂಗಳಿಗೆ ರೂ. 75,000 ಬಾಡಿಗೆ ನಿಗದಿ ಮಾಡಲಾಗಿತ್ತು. ಆದರೆ ಈ ಬಾಡಿಗೆ ಮನೆಯ ದರವನ್ನು ನೋಡಿ ಯಾರೂ ಬಾಡಿಗೆಗೆ ಬರಲೇ ಇಲ್ಲ! ನಂತರ ಭೂಮಾಲೀಕರು ಬಾಡಿಗೆಯನ್ನು 65,000 ರೂ.ಗೆ ಇಳಿಸಿದರು. ಕೊನೆಗೂ ಕಡಿಮೆ ಬಾಡಿಗೆಯ ಕಾರಣ ಮನೆಗೆ ಬಾಡಿಗೆಗೆ ಬಂದಿದ್ದಾರೆ
ಮನೆಗಳ ಲಭ್ಯತೆಯ ಹೆಚ್ಚಳದಿಂದಾಗಿ ಬಾಡಿಗೆ ಬೇಡಿಕೆಯಲ್ಲಿ ಇಳಿಕೆ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ವೈಟ್ಫೀಲ್ಡ್ನಂತಹ ಐಟಿ ಕೇಂದ್ರಗಳಲ್ಲಿ ಬಾಡಿಗೆ ಬೇಡಿಕೆ ಕಡಿಮೆಯಾಗುವುದರೊಂದಿಗೆ, ಕಾಡುಗೋಡಿ, ಹೂಡಿ ಮತ್ತು ಚನ್ನಸಂದ್ರದಂತಹ ಉಪನಗರಗಳಲ್ಲಿ ಬಾಡಿಗೆದಾರರು ಹೆಚ್ಚು ಕೈಗೆಟುಕುವ ಆಯ್ಕೆಗಳನ್ನು ಹುಡುಕುತ್ತಿದ್ದಾರೆ.
ಈ ಪ್ರದೇಶಗಳಲ್ಲಿ 2BHK ಅಪಾರ್ಟ್ಮೆಂಟ್ಗಳ ಬಾಡಿಗೆ ಬೆಲೆಗಳು ಕಳೆದ ವರ್ಷದಿಂದ 40,000 ರೂ.ನಿಂದ 30,000-35,000 ರೂ.ಗೆ ಕುಸಿದಿವೆ. ಹೆಚ್ಚಿದ ಲಭ್ಯತೆ ಮತ್ತು ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯ ಏರಿಕೆಯಿಂದಾಗಿ ಈ ಇಳಿಕೆಯಾಗಿದೆ
2024 ರ ಏಪ್ರಿಲ್-ಜೂನ್ ಅವಧಿಯಲ್ಲಿ ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯು ಗಮನಾರ್ಹ ಇಳಿಕೆಯಾಗಿದೆ ಎಂದು ತಜ್ಞರು ಗಮನಿಸಿದ್ದಾರೆ.
ಮುಂದಿನ ದಿನಗಳ್ಲಲಿ ಸಹ ಬಾಡಿಗೆ ಮನೆಗಳ ದರ ಇಳಿಕೆ ಆಗುವ ಪ್ರವೃತ್ತಿ ಮುಂದುವರೆಯುವ ಲಕ್ಷಣಗಳಿವೆ. ಬಾಡಿಗೆದಾರರನ್ನು ಆಕರ್ಷಿಸಲು ಮನೆ ಮಾಲೀಕರು ಸ್ಪರ್ಧಾತ್ಮಕ ದರಗಳತ್ತ ಚಿತ್ತ ಹರಿಸಬೇಕಾದ ಪರಿಸ್ಥಿತಿ ಬಂದಿರುವುದು ಬಾಡಿಗೆ ಮನೆ ಹುಡುಕಾಟದಲ್ಲಿರುವವರಿಗೆ ನಿಜಕ್ಕೂ ಸಂತಸ ತಂದಿದೆ