ಕೆಲವರಿಗೆ ನಡುರಾತ್ರಿ ಇದ್ದಕ್ಕಿದ್ದಂತೆ ಮೈ ಬೆವರುವುದು, ಮೈ ಬಿಸಿಯಾದಂತಾಗುವುದು, ಚಂದನೆಯ ಮಳೆಯ ಸಂಜೆಯಲ್ಲೂ, ಅಯ್ಯೋ ಸೆಖೆ ಎನ್ನುವಂತಾಗುವುದು ಇರುತ್ತವೆ. ಬಿಸಿಯಾದಂತಾಗುವುದು, ಚಂದನೆಯ ಮಳೆಯ ಸಂಜೆಯಲ್ಲೂ, ಅಯ್ಯೋ ಸೆಖೆ ಎನ್ನುವಂತಾಗುವುದು ಇರುತ್ತವೆ. ಯಾವಾಗಲೂ ಅಲ್ಲದಿದ್ದರೂ, ಆಗಾಗ ಈ ಸಮಸ್ಯೆ ಕೆಲವರನ್ನು ಬಹಳವಾಗಿ ಕಾಡುತ್ತದೆ
ಇಂತಹ ಎಷ್ಟೋ ಸಮಸ್ಯೆಗಳಿಗೆ ನಿಸರ್ಗದಲ್ಲೇ ಉತ್ತರವಿದೆ. ನಮ್ಮ ಭಾರತೀಯ ಆಯುರ್ವೇದ ಪದ್ಧತಿಯು ಈ ನಿಸರ್ಗದ ಶಕ್ತಿಯನ್ನು ಧಾರೆಯೆರೆಯುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುತ್ತದೆ. ಈ ಇದ್ದಕ್ಕಿದ್ದಂತೆ ಸೆಖೆಯಾಗುವ ಮೈ ಬೆವರುವ ಸಮಸ್ಯೆ ಇರುವ ಮಂದಿಗೆ ಕೊತ್ತಂಬರಿ ಸೊಪ್ಪು ಸುಲಭವಾದ ಹಾಗೂ ಸರಳವಾದ ಉತ್ತರ.
ಪಿತ್ತ ಹೆಚ್ಚಾದ ದೇಹ ಯಾವಾಗಲೂ ಉಷ್ಣ ಪ್ರಕೃತಿಯ ಸಮಸ್ಯೆಯನ್ನೂ ಹೊಂದಿರುತ್ತದೆ. ಇಂಥವರಿಗೆ ದೇಹದಲ್ಲಿ ಉಷ್ಣ ಹೆಚ್ಚಾಗುವುದು ಜಾಸ್ತಿ. ಅಸಿಡಿಟಿ, ಮೈಗ್ರೇನ್, ರಾತ್ರಿ ಸೆಖೆಯಾಗಿ ಮೈ ಬೆವರುವ ಸಮಸ್ಯೆ ಇರುವ ಮಂದಿಗೆ ಕೆಲವು ಸರಳ ಪರಿಹಾರಗಳಿಂದಲೇ ಉತ್ತರ ಸಿಗುತ್ತದೆ. ಅವುಗಳಲ್ಲಿ ಕೊತ್ತಂಬರಿ ಸೊಪ್ಪಿನ ನೀರು ಕೂಡಾ ಒಂದು. ಅತ್ಯಂತ ಕಡಿಮೆ ಕ್ಯಾಲರಿ ಹೊಂದಿರುವ ಅಂದರೆ, ನೂರು ಗ್ರಾಂ ಕೊತ್ತಂಬರಿ ಸೊಪ್ಪಿನಲ್ಲಿ 31 ಕಿಲೋಕ್ಯಾಲರಿಗಳಷ್ಟು ಇರುವುದರಿಂದ ಇದು ತೂಕ ಇಳಿಸುವ ಮಂದಿಯೂ ಸೇರಿದಂತೆ ಎಲ್ಲರಿಗೂ ಒಳ್ಳೆಯದು. ಇದರಲ್ಲಿರುವ ಪ್ರೊಟೀನ್, ನಾರಿನಂಶ, ವಿಟಮಿನ್ ಸಿ ಎಲ್ಲವೂ ದಿನವೂ ನಮ್ಮ ದೇಹಕ್ಕೆ ಬೇಕಾದ ಶೇ. 70ರಷ್ಟು ಪೂರೈಕೆಯನ್ನು ಮಾಡುತ್ತದೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ಎರಡೆರಡು ಬಾರಿ ತೊಳೆದುಕೊಂಡು ಇದನ್ನು ಅರ್ಧ ಲೀಟರ್ನಷ್ಟು ನೀರಿಗೆ ಹಾಕಿ ಚೆನಾಗಿ ಕುದಿಸಿ ತಣಿಸಯಲು ಬಿಡಿ. ಈ ನೀರನ್ನು ಇಡೀ ದಿನ ಸ್ವಲ್ಪ ಸ್ವಲ್ಪ ಕುಡಿಯುತ್ತಿರಬಹುದು. ಅಥವಾ ಬೆಳಗ್ಗೆ ಎದ್ದ ತಕ್ಷಣ ಇದನ್ನು ಮಾಡಿಕೊಂಡು ಕುಡಿಯಬಹುದು. ಇದರಿಂದ ದೇಹದ ಪಚನಕ್ರಿಯೆಯೂ ಉತ್ತಮವಾಗುವುದರ ಜೊತೆಗೆ ದೇಹ ತಂಪಾಗುತ್ತದೆ.
ಕೇವಲ ಒಂದೆರಡು ದಿನ ಹೀಗೆ ಮಾಡುವುದಲ್ಲ. ನಿತ್ಯವೂ ನಿಯಮಿತವಾಗಿ ಇದನ್ನು ಮಾಡಿದಲ್ಲಿ ಉತ್ತಮ ಸುಧಾರಣೆ ಕಾಣಬಹುದು. ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ ಹೇರಳವಾಗಿದ್ದು ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿಯೂ ಹೇರಳವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ವಿಟಮಿನ್ ಸಿ ಬಹಳ ಅಗತ್ಯ. ಅಷ್ಟೇ ಅಲ್ಲ, ಮ್ಯಾಂಗನೀಸ್, ಪಾಸ್ಪರಸ್ ಇತ್ಯಾದಿಗಳೂ ಇರುವುದರಿಂದ ರಕ್ತ ಹೆಪ್ಪುಗಟ್ಟುವಿಕೆಗೆ, ಎಲುಬಿನ ಹಾಗೂ ಹಲ್ಲಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಹೀಗಾಗಿ, ಕೇವಲ ಈ ಸಮಸ್ಯೆ ಇರುವ ಮಂದಿ ಮಾತ್ರವಲ್ಲ, ಎಲ್ಲರೂ ಇದನ್ನು ಸೇವಿಸಬಹುದು.