ಬೆಂಗಳೂರು: ಜುಲೈ 15ರಿಂದ 26ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ದ ಜಂಟಿ ಹೋರಾಟ ನಡೆಸಲು ಪ್ರತಿಪಕ್ಷ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷವಾದ ಜೆಡಿಎಸ್ ನಿರ್ಧರಿಸಿವೆ.
ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಮುಖವಾಗಿ ಮೂಡಾ ನಹಗರಣ, ವಾಲ್ಮೀಕಿ ನಿಗಮದ ಅಕ್ರಮ, ಗ್ಯಾರಂಟಿ ಯೋಜನೆಗಳಿಗೆ ಎಸ್ ಸಿಪಿ/ಟಿಎಸ್ ಪಿ ಹಣ ಬಳಕೆ , ಡೆಂಗ್ಯೂ ನಿಯಂತ್ರಣದಲ್ಲಿನ ವೈಫಲ್ಯ ಸೇರಿದಂತೆ ಹಲವು ವಿಷಯಗಳನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಧಾಳಿಗೆ ಪ್ರತಿಪಕ್ಷಗಳು ಉದ್ದೇಶಿಸಿವೆ.
ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಬಾರ್&ರೆಸ್ಟೋರೆಂಟ್ ತೆರೆಯಲು ಮನವಿ!
ಇದೇ ವೇಳೆ ಪ್ರತಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರಗನ್ನು ಎಸೆಯಲು ಆಡಳಿತ ಸರ್ಕಾರವಿ ಸಿದ್ದತೆ ಮಾಡಿಕೊಂಡಿದೆ, ಇದಕ್ಕೆ ಪೂರಕವಾದ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾಲು ಸಾಲು ಸಭೆಗಳನ್ನು ನಡೆಸಿ ದಾಖಲೆಗಳು ಮತ್ತು ದತ್ತಾಂಶಗಳ ಸಂಗ್ರವನ್ನು ಆಡಳಿತ ಪಕ್ಷ ಸಿದ್ದಪಡಿಸಿಕೊಂಡಿದೆ. ಜೊತೆಗೆ, ಶಿವಮೊಗ್ಗದ ಸೂಡಾ ಅಕ್ರಮ ಪ್ರಕರಣ, ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ಸಹ ಪ್ರತಿತಂತ್ರ ರೂಪಿಸಿದೆ. ಈ ತಂತ್ರ-ಪ್ರತಿತಂತ್ರಗಳಿಂದಾಗಿ ಅಧಿವೇಶನ ಕಾವೇರುವ ಸಾಧ್ಯತೆಗಳಿವೆ.