ಬೆಂಗಳೂರು:- ಸರ್ಕಾರದ ಗ್ಯಾರಂಟಿ ಸೌಲಭ್ಯಕ್ಕಾಗಿ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಅನರ್ಹರು ಕೂಡ ಗ್ಯಾರಂಟಿ ಯೋಜನೆಗಳ ಸೌಲಭ್ಯ ವನ್ನು ಪಡೆದು ಕೊಳ್ಳುತ್ತಿದ್ದು ಇದೀಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಕಾರ್ಡುಗಳನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದಾರೆ.
ಸರಕಾರಿ ನೌಕರಿ, ತೆರಿಗೆ ಪಾವತಿ ಮಾಡೋರು, ಹೆಚ್ಚಿನ ಆದಾಯ ಉಳ್ಳವರನ್ನು ಪತ್ತೆ ಹಚ್ಚಲು ಈ ಬಗ್ಗೆ ಮಾಹಿತಿ ಕಲೆ ಹಾಕಲು ಆಹಾರ ಇಲಾಖೆ ಮುಂದಾಗಿದೆ. ಅನರ್ಹ ಕಾರ್ಡ್ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಇತರ ಇಲಾಖೆಯ ಅಧಿಕಾರಿಗಳು ಕೈ ಜೋಡಿಸಲಿದ್ದಾರೆ.
ನಿಮ್ಮ ಬಿಪಿಎಲ್ ಕಾರ್ಡ್ ರದ್ದು ಆದರೆ ನೀವು ನಿಮ್ಮ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಬಹುದು. ದಾಖಲೆಗಳನ್ನು ತಿದ್ದುಪಡಿ ಮಾಡುವ ಮೂಲಕ ಸರಿ ಪಡಿಸಬಹುದು.ಇನ್ನು ಸರಕಾರ ಹೊಸದಾಗಿ ಹೊಸ ಕಾರ್ಡ್ ಗಳಿಗೂ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಿದೆ. ಆ ಸಂದರ್ಭದಲ್ಲಿ ಅರ್ಜಿ ಹಾಕಬಹುದು.
ಮೊದಲಿಗೆ ಫಲಾನುಭವಿಗಳು ಆಹಾರ ಇಲಾಖೆಯ ಲಿಂಕ್ https://ahara.kar.nic.in ಇಲ್ಲಿಈ ಸರ್ವಿಸ್ E-Services ಎಂಬ ಆಯ್ಕೆ ಕಾಣಲಿದ್ದು ಇದರಲ್ಲಿ ಇ ರೇಷನ್ ಕಾರ್ಡ್ (e-Ration Card) ಎಂಬ ಆಯ್ಕೆ ಕೂಡ ಬರಲಿದೆ. ನಂತರದಲ್ಲಿ ರದ್ದುಪಡಿಸಿದ ರೇಷನ್ ಕಾರ್ಡ್ಗಳ ಪಟ್ಟಿ ಎಂಬ ಆಯ್ಕೆ ಇರಲಿದ್ದು, ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ವರ್ಷ ಇತ್ಯಾದಿ ದಾಖಲೆ ಹಾಕಿ ಆ ಮಾಹಿತಿಗಳನ್ನು ಸಲ್ಲಿಕೆ ಮಾಡಿದರೆ ಕಾರ್ಡ್ ರದ್ದು ಆದರೆ ಮಾಹಿತಿ ಸಿಗಲಿದೆ.