ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (RadhikaMerchant) ಅವರ ವಿವಾಹ ಮಹೋತ್ಸವ ವೈಭವೋಪೇತವಾಗಿ ನೆರವೇರಿದೆ. ಜುಲೈ 12ರಂದು ವಿವಾಹಮಹೋತ್ಸವ ನೆರವೇರಿದ್ದರೂ ಜು.13, 14ರಂದು ರಿಸೆಪ್ಷನ್ ಮಾದರಿಯ ಎರಡು ಸಮಾರಂಭ ಜರುಗಲಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯುತ್ತಿರುವ ಈ ಅದ್ಧೂರಿ ವಿವಾಹ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ನೂರಾರು ಗಣ್ಯರು ಆಗಮಿಸಿದ್ದಾರೆ.
ಸತಿ, ಪತಿಗಳಾದ ಅನಂತ್ ಅಂಬಾನಿ, ರಾಧಿಕಾ: ಅದ್ದೂರಿ ಮದುವೆ ಮೊದಲ ಫೋಟೋ ವೈರಲ್
ಮದುವೆಗೆ ಬಂದ ಗಣ್ಯರಿಗೆ ಭರ್ಜರಿ ಭೋಜನ ರೆಡಿಯಾಗಿತ್ತು ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆಯು ಆಹಾರವನ್ನು ಪೂರೈಸುತ್ತಿದೆ. ರಾಮೇಶ್ವರಂ ಕೆಫೆಯ ಹಲವು ತಿಂಡಿ ತಿನಿಸುಗಳು ಕೂಡ ಇದರ ಭಾಗವಾಗಿವೆ. ರಾಮೇಶ್ವರಂ ಕೆಫೆಯ ಫೇಮಸ್ ದೋಸೆ, ಬಟರ್ ದೋಸೆ, ತುಪ್ಪದ ದೋಸೆ, ಗಾರ್ಲಿಕ್ ದೋಸೆ, ಪೆಸರಟ್ಟು ದೋಸೆ, ಇಡ್ಲಿ, ತಟ್ಟೆ ಇಡ್ಲಿ, ತುಪ್ಪದ ಪಡ್ಡು, ಬೋಂಡಾ ಸೂಪ್ ಹಾಗೂ ಫಿಲ್ಟರ್ ಕಾಫಿಯನ್ನು ಮದುವೆಯ ಭೋಜನದಲ್ಲಿ ಬಡಿಸಲಾಗಿದೆ.
ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಇದಾಗಿದೆ ಎಂದು ರಾಮೇಶ್ವರಂ ಕೆಫೆ ಇನ್ಸ್ಟಾ ಮೂಲಕ ಹೇಳಿಕೊಂಡಿದೆ. ಈವೆಂಟ್ಗೆ ಹಾಜರಾದ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ಗಳು ಕೆಫೆ ನೀಡುವ ಆಹಾರವನ್ನು ಆನಂದಿಸಿದ್ದಾರೆ ಎಂದು ರಾಮೇಶ್ವರಂ ಕೆಫೆ ಹೇಳಿಕೊಂಡಿತ್ತು. ಸದ್ಯ ಅನಂತ್ ಹಾಗೂ ರಾಧಿಕಾ ಮದುವೆಗೆ ಬಂದ ಗಣ್ಯರು ರಾಮೇಶ್ವರಂ ಕೆಫೆ ತಿಂಡಿ ತಿನಿಸುಗಳನ್ನು ಎಂಜಾಯ್ ಮಾಡುತ್ತಾ ತಿನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಾಮೇಶ್ವರಂ ಕೆಫೆಯ ತಿಂಡಿ ತಿನಿಸುಗಳು ಫೇಮಸ್ ಆಗಿವೆ.