ಲಂಡನ್: 7 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ ಹಾಗೂ ಟೆನಿಸ್ ಲೋಕದ ಹೊಸ ಸೂಪರ್ಸ್ಟಾರ್ ಕಾರ್ಲೊಸ್ ಆಲ್ಕರಜ್ ವಿಂಬಲ್ಡನ್ ಗ್ಯಾನ್ʼಸ್ಲಾಂ ಫೈನಲ್ʼಗೆ ಲಗ್ಗೆಯಿಟ್ಟಿದ್ದಾರೆ. ಸತತ 6ನೇ ವರ್ಷ ಫೈನಲ್ಗೇರಿರುವ ಜೋಕೋ, ಒಟ್ಟಾರೆ 10ನೇ ಬಾರಿಗೆ ಫೈನಲ್ನಲ್ಲಿ ಆಡಲಿದ್ದು, ಆಲ್ಕರಜ್ ಸತತ 2ನೇ ವರ್ಷ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ 21 ವರ್ಷದ ಆಲ್ಕರಜ್, 5ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡೈಡೆವ್ ವಿರುದ್ಧ 6-7(1/7), 6-3, 6-4, 6-4 ಸೆಟ್ಗಳಲ್ಲಿ ಜಯಿಸಿದರು. 2021ರ ಯುಎಸ್ ಓಪನ್ ವಿಜೇತ ಮೆಕ್ವೆಡೆವ್ 3ನೇ ಸೆಟ್ನಲ್ಲಿ ಆಲ್ಕರಜ್ಗೆ ಉತ್ತಮ ಪೈಪೋಟಿ ನೀಡಿದರಾದರೂ, ಪಂದ್ಯ ದ ಮೇಲೆ ಹಿಡಿತ ಸಾಧಿಸಲಾಗಲಿಲ್ಲ.
ಇದರೊಂದಿಗೆ ವಿಂಬಲ್ಡನ್ನಲ್ಲಿ ಸತತ 2ನೇ ಬಾರಿಯೂ ಮೆಡೈಡೆವ್ ಸೆಮಿಫೈನಲ್ನಲ್ಲಿ ಅಭಿಯಾನ ಕೊನೆಗೊ ಳಿಸಿದರು. ಕಳೆದ ವರ್ಷ ಕೂಡಾ ಮೆಡೈಡೆನ್ಗೆ ಆಲ್ಕರಜ್ ವಿರುದ್ಧ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ ಸೋಲು ಎದುರಾಗಿತ್ತು. ಇನ್ನು ಜೋಕೋವಿಚ್, ಇಟಲಿಯ ಲೊರೆನ್ನೊ ಮುಸೆಟ್ಟಿ ವಿರುದ್ಧ6-4, 7-6, 6-4 ನೇರ ಸೆಟ್ಗಳಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.