ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ JioBoycott ಅಭಿಯಾನ ಆರಂಭವಾಗಿದ್ದು, BSNLkigharwapsi (ಬಿಎಸ್ಎನ್ಎಲ್ ಘರ್ ವಾಪಸಿ) ಅಂತ ಬರೆದುಕೊಂಡಿದ್ದಾರೆ. ಯಾವಾಗ ಅಭಿಯಾನ ಆರಂಭವಾಯ್ತೋ ಎಚ್ಚೆತ್ತುಕೊಂಡ ಬಿಎಸ್ಎನ್ಎಲ್ ಟ್ವೀಟ್ ಮಾಡಿ ತನ್ನ ಹೊಸ ಆಫರ್ ಘೋಷಿಸಿದೆ. ಇದರ ಜೊತೆಗೆ ಅಮರನಾಥ ಯಾತ್ರಿಕರಿಗೆ ವಿಶೇಷವಾಗಿ 196 ರೂಗಳಿಗೆ ಹೊಸ ಸಿಮ್ ನೀಡುವ ಘೋಷಣೆ ಮಾಡಿದೆ.
ಹೌದು ಪ್ರಮುಖ ಟೆಲಿಕಾಂ ಆಪರೇಟರ್ಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. ಹೊಸ ದರಗಳು ಜಾರಿಗೆ ಬಂದಿರುವುದಕ್ಕೆ ದೇಶದಲ್ಲಿ ಸರ್ಕಾರಿ ಸ್ವಾಮ್ಯದ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಗೆ ಹಿಂತಿರುಗಲು ಅಭಿಯಾನ ಆರಂಭವಾಗಿದೆ. ಅಭಿಯಾನದ ಭಾಗವಾಗಿ ಒಂದೇ ದಿನಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಿಎಸ್ಎನ್ಎಲ್ಗೆ ತಮ್ಮ ಸಿಮ್ ಅನ್ನು ಪೋರ್ಟ್ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಿಲಾಯನ್ಸ್ ಜಿಯೋನಿಂದ ಬಿಎಸ್ಎನ್ಎಲ್ಗೆ ಬಂದಿದ್ದಾರೆ ಅನ್ನುವುದು ವಿಶೇಷ.
- Rs 18: 1GB data Per day – 2 days
- Rs 87: 1GB data per day, unlimited voice calls, 100 SMS per day – 14 days
- Rs 99: Unlimited voice calls, free PRBT – 18 days
- Rs 105: Unlimited voice calls, 2GB – 18 days
- Rs 118: 0.5GB data per day, unlimited voice calls, free PRBT – 20 days
- Rs 139: Unlimited voice calls, 1.5GB/day, 100 SMS/day – 28 days
- Rs 147: 10GB of data, unlimited calls – 30 days
- Rs 184: 1GB of data per day, unlimited calls – 28 days
- Rs 185: 1GB of data per day, unlimited calls – 28 days
- Rs 186: 1GB of data per day, unlimited calls – 28 days
- Rs 187: 2GB of data per day, unlimited calls – 28 days
- Rs 228: Unlimited voice calls, 2GB/day, 100SMS/day – 1 Month
- Rs 239: Unlimited voice calls, 2GB/day, 100SMS/day – 1 Month
- Rs 247: 3GB of data per day, unlimited calls – 36 days
- Rs 269: 2GB of data per day, unlimited calls – 30 days
- Rs 298: Unlimited voice calls, 1GB/day, 100SMS/day – 52 days
- Rs 299: Unlimited voice calls, 3GB/day, 100SMS/day – 30 days
- Rs 319: Unlimited voice call – 75 days
- Rs 347: 2GB of data per day, unlimited calls – 56 days
- Rs 399: 1GB of data per day, 100 SMS per day – 30 days
- Rs 439: Unlimited calls, 100 SMS per day – 90 days
- Rs 485: 1.5GB of data/day. unlimited calls, 100 SMS per day – 82 days
- Rs 499: 1GB data per day, unlimited calls – 90 days
- Rs 599: 3GB data per day, unlimited calls – 84 days
- Rs 769: Unlimited calls, 12GB/day, 100 SMS per day – 84 days
BSNL ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಮತ್ತು ಈಗ BSNL ಗೆ ಪೋರ್ಟ್ ಮಾಡಲು ಯೋಜಿಸುತ್ತಿರುವ ಹೊಸ ಬಳಕೆದಾರರಿಗೆ ಲಾಭದಾಯಕ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಯು ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಹೊರತುಪಡಿಸಿ ದೇಶದಾದ್ಯಂತ ಎಲ್ಲಾ ರಾಜ್ಯಗಳಿಗೆ ಅನ್ವಯವಾಗಲಿದೆ.
ಸದ್ಯ BSNL ನೆಟ್ವರ್ಕ್ 4G ನೆಟ್ವರ್ಕ್ಗಳಿಗೆ ಸೀಮಿತವಾಗಿದೆ. ಆದರೆ ಪ್ರತಿಸ್ಪರ್ಧಿಗಳು 5G ನೆಟ್ವರ್ಕ್ಗಳಿಗೆ ಸ್ಥಳಾಂತರಗೊಂಡಿದ್ದಾರೆ. ನಿಧಾನವಾಗಿ 5G ನೆಟ್ವರ್ಕ್ಗೆ ಬಿಎಸ್ಎನ್ಎಲ್ ಸ್ಥಳಾತರಗೊಳ್ಳು ಕೂಡ ಯೋಚಿಸುತ್ತಿದೆ. ಇದೆಲ್ಲದರ ನಡುವೆ ಬಿಎಸ್ಎನ್ಎಲ್ 199 ರೂ ಪ್ಯಾಕ್ ನ ಆಫರ್ ನೀಡಿದ್ದು, 30 ದಿನದ ವ್ಯಾಲಿಡಿಟಿಗೆ ಒಟ್ಟು 60 GB ಡೇಟಾ ದಿನಕ್ಕೆ 2 GB, 100 ಮೆಸೇಜ್, ಅನಿಯಮಿತ ಕರೆ ನೀಡುತ್ತಿದೆ.
ಬಿಎಸ್ಎನ್ಎಲ್ಗೆ ಪೋರ್ಟ್ ಆಗುವುದು ಹೇಗೆ?
ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜಿಯೋ, ಏರ್ಟೆಲ್ ಮತ್ತು ವಿಐ ಗ್ರಾಹಕರು ಬಿಎಸ್ಎನ್ಎಲ್ನತ್ತ ಮುಖ ಮಾಡುತ್ತಿದ್ದಾರೆ. ಅಂದಹಾಗೆ, ಈಗ ಒಂದು ಟೆಲಿಕಾಂ ಆಪರೇಟರ್ನಿಂದ ಮತ್ತೊಂದಕ್ಕೆ ವರ್ಗಾವಣೆ ಅಥವಾ ಪೋರ್ಟ್ ಆಗುವುದು ಸುಲಭ. ಬಿಎಸ್ಎನ್ಎಲ್ಗೆ ಹೇಗೆ ಪೋರ್ಟ್ ಆಗುವುದು, ಕ್ರಮ ಇಲ್ಲಿದೆ: ಮೊದಲಿಗೆ ನಿಮ್ಮ ಮೊಬೈಲ್ನಿಂದ ‘Port <10 ಅಂಕಿ ಮೊಬೈಲ್ ನಂಬರ್>’ ಟೈಪಿಸಿ 1900 ನಂಬರ್ಗೆ ಎಸ್ಸೆಮ್ಮೆಸ್ ಕಳುಹಿಸಬೇಕು.
(ಉದಾ: Port 9895600426). ಆಗ ಯುಪಿಸಿ ನಂಬರ್ ಅಥವಾ ಯೂನಿಕ್ ಪೋರ್ಟಿಂಗ್ ಕೋಡ್ ಸಿಗುತ್ತದೆ. ಈ ಕೋಡ್ 15 ದಿನ ವ್ಯಾಲಿಡಿಟಿ ಹೊಂದಿರುತ್ತದೆ. ಅಷ್ಟರೊಳಗೆ ನೀವು ಯಾವುದೇ ಬಿಎಸ್ಎನ್ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ಬಿಎಸ್ಎನ್ಎಲ್ ಫ್ರಾಂಚೈಸಿಗೆ ಹೋಗಿ ಅಲ್ಲಿ ಅರ್ಜಿ ತುಂಬಿಸಿಬೇಕು. ಆಗ ಅಲ್ಲಿರುವ ಆಪರೇಟರ್ಗಳು ನಿಮ್ಮ ನಂಬರ್ ಅನ್ನು ಹೊಸ ಸಿಮ್ಗೆ ಪೋರ್ಟ್ ಮಾಡಿಕೊಡುತ್ತಾರೆ.