ಬೆಳಗಾವಿ: ಗೆದ್ದಾಗ ಸೊಕ್ಕಾಗಲಿ, ಸೋತಾಗ ಸೊರಗುವುದಾಗಲಿ ನನ್ನ ಜಾಯಮಾನವಲ್ಲ. ಸೋಲಲಿ, ಗೆಲ್ಲಲಿ ಯಾವತ್ತೂ ಜನರೊಂದಿಗಿದ್ದು ಅವರ ಕಷ್ಟ ಸುಖದಲ್ಲಿ ಭಾಗಿಯಾಗುವುದು ನನ್ನ ಗುಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಗುರುವಾರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು. ಸೋಲು, ಗೆಲುವು ಸಹಜ ಪ್ರಕ್ರಿಯೆ. ರಾಜಕಾರಣ ನಿಂತ ನೀರಲ್ಲ, ಗೆಲುವು ಯಾರ ಸ್ವತ್ತಲ್ಲ, ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಬೆಳಗಾವಿ ಲೋಕಸಭೆಯ ಇತಿಹಾಸದಲ್ಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆದಿದೆ. ತಾಂತ್ರಿಕವಾಗಿ ಸೋತಿರಬಹುದು.
ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಶುಭ ಸುದ್ದಿ: ಶೀಘ್ರದಲ್ಲಿಯೇ 10 ಸಾವಿರ ಶಿಕ್ಷಕರ ನೇಮಕ – ಮಧು ಬಂಗಾರಪ್ಪ
ಆದರೆ ಅತೀ ದೊಡ್ಡ ಸಂಖ್ಯೆಯಲ್ಲಿ ಜನರು ನಮ್ಮನ್ನು ಬೆಂಬಲಿಸಿದ್ದಾರೆ. ಪ್ರಚಾರಕ್ಕೆ ಹೋದಾಗ ಎಲ್ಲಕಡೆ ಅಭೂತಪೂರ್ವ ಬೆಂಬಲ ಸಿಗುತ್ತಿತ್ತು. ಈ ಬಾರಿ ಕಾಂಗ್ರೆಸ್ ಗೆೆಲುವು ಖಚಿತ ಎಂದು ಎಲ್ಲ ಕಡೆ ಜನರೇ ಮಾತನಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಸೋತಿರಬಹುದು. ಇಂದಿರಾಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಸೋತವರೆಲ್ಲ ಮತ್ತೆ ಎದ್ದು, ಗೆದ್ದು ರಾಜಕಾರಣದಲ್ಲಿ ಹೆಸರು ಮಾಡಿದ್ದಾರೆ. ಅವರು ನಮಗೆ ಆದರ್ಶ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.