ಚಳಿಗಾಲದಲ್ಲಿ ನಾಲಿಗೆಗೆ ರುಚಿ ಕೊಡುವ ಒಂದೊಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುವ ಹಸಿಮೆಣಸಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ ನೋಡಿ..
ಮುರುಘಾ ಮಠದಲ್ಲಿ ಕಳ್ಳರ ಕೈಚಳಕ: ಮುರುಘಾಶ್ರೀ ಬೆಳ್ಳಿ ಪ್ರತಿಮೆ ಕಳ್ಳತನ!
ಬೇಕಾಗುವ ಸಾಮಗ್ರಿಗಳು
ಹಸಿರು ಮೆಣಸಿನಕಾಯಿಗಳು ಖಾರ ಕಡಿಮೆ ಇರುವಂತದ್ದು
2 ಟೇಬಲ್ಸ್ಪೂನ್ ಕೊತ್ತಂಬರಿ ಬೀಜಗಳು
1 ಚಮಚ ಸೊಂಪು
1 ಟೀಸ್ಪೂನ್ ಆಮ್ಚೂರ್ ಪುಡಿ
1 ಟೀಚಮಚ ಮೆಂತ್ಯ
1 ಟೀಚಮಚ ಸಾಸಿವೆ
¼ ಟೀಚಮಚ ಅರಿಶಿನ
1 ಚಿಟಿಕೆ ಇಂಗು
2 ಸಾಸಿವೆ ಎಣ್ಣೆ
1.5 ಟೀಸ್ಪೂನ್ ವಿನೆಗರ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ನೀವು ಎಲ್ಲಾ ಹಸಿಮೆಣಸುಗಳನ್ನು ತೊಳೆದುಕೊಳ್ಳಿ ನಂತರ ಅದನ್ನು ಚೆನ್ನಾಗಿ ವರೆಸಿ ಒಂದು ಕಡೆ ಇಡಿ. ಸಂಪೂರ್ಣವಾಗಿ ನೀರು ಆರಿದ ನಂತರ ನೀವು ಅದನ್ನು ಮತ್ತೊಮ್ಮೆ ಒಣ ಬಟ್ಟೆಯಲ್ಲಿ ವರೆಸಿಕೊಂಡು ಅದನ್ನು ಮಧ್ಯದಲ್ಲಿ ಸೀಳಿಕೊಳ್ಳಿ. ನಂತರ ಅದರಲ್ಲಿರುವ ಬೀಜಗಳನ್ನು ತೆಗೆದುಕೊಳ್ಳಿ, ನಂತರ ಮಸಾಲೆಯನ್ನು ಹುರಿದುಕೊಳ್ಳಿ. ಮಸಾಲೆಯನ್ನು ತಯಾರಿಸುವ ವಿಧಾನ ಹೀಗಿದೆ ಗಮನಿಸಿ.
ಮೊದಲಿಗೆ ಒಂದು ತವಾ ತೆಗೆದುಕೊಳ್ಳಿ. ಅದಕ್ಕೆ ಎಣ್ಣೆ ಹಾಕದೇ ಮೆಂತೆ, ಜೀರಿಗೆ ಹಾಗೂ ಸಾಸಿವೆಯನ್ನು ಹುರಿದುಕೊಳ್ಳಿ. ನಂತರ ಅವುಗಳು ಹಿರಿದ ನಂತರ ಮಿಕ್ಸಿಗೆ ಹಾಕಿ. ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಅದೇ ಸಂದರ್ಭದಲ್ಲಿ ನೀವು ಉಪ್ಪನ್ನು ಸೇರಿಸಿಕೊಳ್ಳಿ. ನಂತರ ಒಂದು ತವಾಗೆ ಸಾಸಿವೆ ಎಣ್ಣೆಯನ್ನು ಹಾಕಿ ಅದರಲ್ಲಿ ನೀವು ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಬಿಸಿ ಮಾಡಿ. ನಂತರ ಹಸಿ ಮೆಣಸಿನ ಒಳಗಡೆ ಭಾಗದಲ್ಲಿ ಒಂದು ಚಮಚದಲ್ಲಿ ಈ ಮಿಶ್ರಣವನ್ನು ತುಂಬಿ. ನಂತರ ಇದನ್ನು ಒಂದು ಜಾಡಿಯಲ್ಲಿ ಹಾಕಿ ಸ್ವಲ್ಪ ದಿನ ಹಾಗೇ ಬಿಡಿ. ಅದು ಎಲ್ಲವನ್ನೂ ಹೀರಿಕೊಂಡ ನಂತರ ತಿನ್ನಲು ತುಂಬಾ ರುಚಿಯಾಗಿರುತ್ತದೆ. ನೀವು ಒಮ್ಮೆ ಟ್ರೈ ಮಾಡಿ.