ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿರುವ ವಿಚಾರವಾಗಿ ತರುಣ್ ಸುಧೀರ್ ಭಾವುಕರಾಗಿ ಮಾತನಾಡಿದ್ದಾರೆ.
ಹೆಣ್ಣುಮಕ್ಕಳೇ ಮುಟ್ಟಿನ ನೋವು ಕಡಿಮೆಯಾಗಬೇಕಾ!?, ನಿತ್ಯ ಈ ಆಹಾರ ತಪ್ಪದೇ ತಿನ್ನಿ!
ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮನಸ್ಸಿಗೆ ನೋವಾಗಿದೆ. ರೇಣುಕಾ ಸ್ವಾಮಿ ಕುಟುಂಬದ ಬಗ್ಗೆಯೂ ನನಗೆ ಅಪಾರವಾದ ನೋವು ಇದೆ. ಈ ಘಟನೆ ಆಗಬಾರದಿತ್ತು. ಇಲ್ಲಿ ಕೂಡ ನಮ್ಮ ಕುಟುಂಬ ಇದೆ. ನಮ್ಮ ಅಣ್ಣನೇ ಆ ರೀತಿ ಮಾಡಿದ್ದರೆ ಏನು ನೋವು ಆಗುತ್ತೋ ಅದೇ ನೋವಲ್ಲಿ ನಾನು ಇದ್ದೇನೆ. ದರ್ಶನ್ ಅವರದ್ದು ತಪ್ಪು ಇಲ್ಲ ಅಂತಲೇ ಹೊರಗೆ ಬರಬಹುದಲ್ಲ ಎಂಬ ನಂಬಿಕೆ ನನ್ನದು. ಅದನ್ನೂ ಮೀರಿ ಕಾನೂನು ಇದೆ. ತನಿಖೆ ಸರಿಯಾಗಿ ಆಗುತ್ತದೆ ಎಂದರು.
ವೈಯಕ್ತಿಕವಾಗಿ ನಾನೂ ಏನೂ ಹೇಳೋಕೆ ಆಗಲ್ಲ. ದರ್ಶನ್ ಅವರನ್ನು ನಂಬಿಕೊಂಡ ದೊಡ್ಡ ಕುಟುಂಬಕ್ಕೆ ಕೂಡ ನೋವು ಆಗಿದೆ’ ಎಂದರು.