ಟಿ20 ನಾಯಕತ್ವಕ್ಕೆ ಸ್ಟಾರ್ ಬೌಲರ್ ವನಿಂದು ಹಸರಂಗ ಗುಡ್ ಬೈ ಹೇಳಿದ್ದಾರೆ.
ಜುಲೈ 26 ರಿಂದ ಬಲಿಷ್ಠ ಟೀಂ ಇಂಡಿಯಾಕ್ಕೆ ಮೂರು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಶ್ರೀಲಂಕಾ ತಂಡ ಆತಿಥ್ಯವಹಿಸಬೇಕಾಗಿದೆ. ಈ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಶ್ರೀಲಂಕಾ ಟಿ20 ತಂಡದ ನಾಯಕ ವನಿಂದು ಹಸರಂಗ ತಮ್ಮ ನಾಯಕತ್ವಕ್ಕೆ ಇದ್ದಕ್ಕಿದ್ದಂತೆ ವಿದಾಯ ಹೇಳಿದ್ದಾರೆ
ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರದರ್ಶನ ವಿಶೇಷವೇನೂ ಆಗಿರಲಿಲ್ಲ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಂಡ ಸೋಲನ್ನು ಎದುರಿಸಬೇಕಾಯಿತು. ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ತಂಡವು ಸಾಕಷ್ಟು ಟೀಕೆಗೆ ಒಳಗಾಗಿತ್ತು. ಹೀಗಾಗಿ ತಂಡದ ಕಳಪೆ ಪ್ರದರ್ಶನದ ಹೊಣೆ ಹೊತ್ತು ಹಸರಂಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ