ಬೆಂಗಳೂರು :- ಎಲ್ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಗ್ರಾಹಕರಿಂದ ಇಕೆವೈಸಿ ಪಡೆಯುವಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಿದೆ.
ಐಒಸಿ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಗ್ರಾಹಕರಿಂದ ಆಧಾರ್ ಆಧಾರಿತ ಇಕೆವೈಸಿ ಪಡೆಯುತ್ತಿವೆ. ಅಡುಗೆ ಅನಿಲ ಸಂಪರ್ಕವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಕಾರ್ಯ ಮಾಡಲಾಗುತ್ತಿದೆ.
ಗಂಡನ ATM ಹೆಂಡತಿ ಕೈಯಲ್ಲೇ ಇದ್ದರೆ ಒಳ್ಳೆಯದು – ಸುಪ್ರೀಂ ಮಹತ್ವದ ತೀರ್ಪು!
ಈ ಬಗ್ಗೆ ಹರ್ದೀಪ್ ಸಿಂಗ್ ಪುರಿ ಮೊನ್ನೆ ಮಾತನಾಡಿ, ಆಧಾರ್ ಮೂಲಕ ಇಕೆವೈಸಿ ಅಪ್ಡೇಟ್ ಮಾಡಲು ಕಾರಣಗಳನ್ನು ನೀಡಿದ್ದಾರೆ. ಅಡುಗೆ ಅನಿಲವನ್ನು ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತದೆ. 14.2 ಕಿಲೋ ತೂಕದ ಅಡುಗೆ ಅನಿಲ ಸಿಲಿಂಡರ್ನ ಬೆಲೆ ಸದ್ಯ 803 ರೂ ಇದೆ. ಆದರೆ, 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1,646 ರೂ ಇದೆ. ಸುಮಾರು 600 ರೂನಷ್ಟು ಅಂತರ ಇದೆ. ಸಾಕಷ್ಟು ಜನರು ವಾಣಿಜ್ಯ ಉಪಯೋಗಕ್ಕೆ ಅಡುಗೆ ಅನಿಲವನ್ನೇ ಬಳಸುತ್ತಿದ್ದಾರೆ. ಹೋಟೆಲ್ ಇತ್ಯಾದಿಯವರು ಅಡುಗೆ ಅನಿಲ ಬಳಕೆದಾರರ ಹೆಸರಲ್ಲಿ ಸಿಲಿಂಡರ್ ಪಡೆದು ಬಳಸುವುದು ಇತ್ಯಾದಿ ನಡೆಯುತ್ತಿದೆ. ಇದನ್ನು ತಡೆಯಲು ಸರ್ಕಾರ ಗ್ರಾಹಕರಿಂದ ಆಧಾರ್ ಇಕೆವೈಸಿ ಮಾಡಿಸುವಂತೆ ಇಂಡೇನ್, ಎಚ್ಪಿ, ಬಿಪಿ ಗ್ಯಾಸ್ ವಿತರಕರಿಗೆ ತಿಳಿಸಿದೆ.
ಇಕೆವೈಸಿ ಅಪ್ಡೇಟ್ ಮಾಡುವುದು ಹೇಗೆ?
ನಿಮಗೆ ಗ್ಯಾಸ್ ಡೆಲಿವರಿಗೆ ಬರುವ ವ್ಯಕ್ತಿಗೆ ನಿಮ್ಮ ಆಧಾರ್ ವಿವರ ಸಲ್ಲಿಸಬೇಕು. ಅವರ ಬಳಿ ಇರುವ ಆ್ಯಪ್ವೊಂದರಲ್ಲಿ ನಿಮ್ಮ ಆಧಾರ್ ವಿವರ ಫೀಡ್ ಮಾಡಲಾಗುತ್ತದೆ. ಆಧಾರ್ಗೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಅದನ್ನು ಸಲ್ಲಿಸಿದರೆ ಇಕೆವೈಸಿ ಅಪ್ಡೇಟ್ ಆದಂತೆ.
ನಿಮ್ಮ ಗ್ಯಾಸ್ ವಿತರಕ ಏಜೆನ್ಸಿಯ ಕಚೇರಿಗೆ ಹೋಗಿ ಇಕೆವೈಸಿ ಮಾಡಬಹುದು. ನಿಮ್ಮ ಆಧಾರ್ ಪ್ರತಿಯನ್ನು ಅಲ್ಲಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.
ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಮೊಬೈಲ್ ಆ್ಯಪ್ಗಳಲ್ಲಿ ಇಕೆವೈಸಿ ಅಪ್ಡೇಟ್ ಮಾಡುವ ಅವಕಾಶ ಇರುತ್ತದೆ.