ನವದೆಹಲಿ: ಸುಪ್ರೀಂ ಕೋರ್ಟ್ ನಿಂದ ಭಾರತದ ಮಹಿಳಾ ಮಣಿಗಳು ಹಾಗೂ ಗೃಹಿಣಿಯರಿಗೆ ಗುಡ್ನ್ಯೂಸ್ ಸಿಕ್ಕಿದೆ.. ಇಷ್ಟು ದಿನ ನೀವು ಗಂಡನ ಬಳಿ ತಮ್ಮ ಸ್ವಂತ ಖರ್ಚಿಗೆ ದುಡ್ಡು ಕೇಳಬೇಕಿತ್ತು. ಆದ್ರೆ ಈಗ ಕಾಲ ಬದಲಾಗುತ್ತಿದೆ. ಕಾಡಿ ಬೇಡಿದ್ರೂ ಒಂದಿಷ್ಟು ಹಣ ಸಿಗುತ್ತಿದ್ದ ನಿಮ್ಮ ಕೈಗೆ ATM ಸಿಗೋ ಕಾಲ ಬಂದಿದೆ. ಏನೆಂದು ತಿಳಿಯಲು ಸ್ಟೋರಿ ಓದಿ.
ವಾಲ್ಮೀಕಿ ನಿಗಮ ಹಗರಣ: ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ!
ಗೃಹಿಣಿಯರ ವೈಯಕ್ತಿಕ ಖರ್ಚಿಗೆ ಗಂಡಂದಿರು ಹಣ ಕೊಡಲೇಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದ್ದಾರೆ.
ಗೃಹಿಣಿಯರ ಪಾತ್ರ ಮತ್ತು ಕುಟುಂಬಕ್ಕಾಗಿ ಅವರು ಮಾಡುವ ತ್ಯಾಗವನ್ನು ಭಾರತೀಯ ಪುರುಷರು ಗುರುತಿಸುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಗೃಹಿಣಿಯರ ಹಕ್ಕುಗಳನ್ನು ಒತ್ತಿ ಹೇಳುವ ಮೂಲಕ ಭಾರತೀಯ ಗೃಹಿಣಿಯರ ಮೂಕವೇದನೆಗೆ ದನಿಯಾಗಿದೆ.
ಕುಟುಂಬದಲ್ಲಿ ಗೃಹಿಣಿಯರ ಪ್ರಮುಖ ಪಾತ್ರವನ್ನು ಒತ್ತಿಹೇಳಿರುವ ನ್ಯಾಯಾಲಯ, ಗಂಡಂದಿರು ತಮ್ಮ ಹೆಂಡತಿಯರಿಗೆ ಆರ್ಥಿಕ ನೆರವು ನೀಡುವುದು ಅಗತ್ಯ ಎಂದು ಹೇಳಿದರು. ನ್ಯಾಯಮೂರ್ತಿ ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ, ಭಾರತೀಯ ವಿವಾಹಿತ ಪುರುಷನು ತನ್ನ ಹೆಂಡತಿಗೆ ಆರ್ಥಿಕವಾಗಿ ಸಬಲರಾಗಲು ನೆರವು ನೀಡಬೇಕು. ಸ್ವತಂತ್ರ ಆದಾಯದ ಮೂಲವನ್ನು ಹೊಂದಿರದ ತನ್ನ ಹೆಂಡತಿಗೆ, ವಿಶೇಷವಾಗಿ ಅವಳ ವೈಯಕ್ತಿಕ ಅಗತ್ಯಗಳಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂಬ ಅಂಶವನ್ನು ಹೇಳಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಗಂಡನ ಹಣಕಾಸಿನ ಸಂಪನ್ಮೂಲಗಳಿಗೆ ಹೆಂಡತಿಗೂ ಪ್ರವೇಶವನ್ನು ನೀಡುವುದು ಎಂದು ಹೇಳಿದ್ದಾರೆ.
ಕೋರ್ಟ್ ನೀಡಿದ ಪ್ರಮುಖ 3 ನಿರ್ದೇಶನಗಳು
ಭಾರತೀಯ ವಿವಾಹಿತ ಪುರುಷರು ತಮ್ಮ ಸಂಗಾತಿಗೆ ತಮ್ಮ ವೈಯಕ್ತಿಕ ವೆಚ್ಚಗಳಿಗಾಗಿ ಹಣ ನೀಡಬೇಕು.
ಮನೆಯ ಖರ್ಚನ್ನು ಹೊರತುಪಡಿಸಿ ಅವರದ್ದೇ ವೈಯಕ್ತಿಕ ಖರ್ಚಿಗೆ ಹಣ ನೀಡಬೇಕು.
ಜಂಟಿ ಬ್ಯಾಂಕ್ ಖಾತೆಯನ್ನು ಹೊಂದುವ ಮೂಲಕ ಅಥವಾ ಎಟಿಎಂ ಕಾರ್ಡ್ ನೀಡಬೇಕು.
ವಿಚ್ಛೇದಿತ ಮುಸ್ಲಿಂ ಮಹಿಳೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಈ ಅಭಿಪ್ರಾಯವನ್ನು ನೀಡಿದೆ.