ಬೆಳಗಾವಿ:- ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮಂಗಗಳು ವಾಹನ ಸವಾರರ ಅತೀಯಾದ ತೊಂದರೆ ನೀಡುತ್ತಿದ್ದು, ವಾಹನ ಸವಾರರನ್ನು ಅಡ್ಡಗಟ್ಟುತ್ತಿದ್ದು, ವಾಹನ ಸವಾರಿಗೆ ಅಡ್ಡಿ ಪಡೀಸಿ, ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆ ಗ್ರಾಮಸ್ಥರು ಹೈರಾಣಾಗಿ ಹೋಗಿದ್ದಾರೆ.
ದ್ವಿಚಕ್ರ ವಾಹನ ಸವಾರನಿಗೆ ಜವರಾಯನಂತೆ ಅಡ್ಡಬಂದು ಡಿಕ್ಕಿ ಹೊಡೆದುದ್ದರಿಂದ ವಾಹನ ಸವಾರನಿಗೆ ಗಂಭೀರ ಗಾಯಗಳಾಗಿದ್ದು,
ತಾಲೂಕಿನ ತಾಂವಶಿ ಗ್ರಾಮದ ಸಿದಗೌಡ ನರಸಗೌಡ ಇಮಗೌಡರ್ ಇತನಿಗೆ ಗಂಭೀರ ಗಾಯಗಳಾಗಿದ್ದು , ಗಾಯಗೊಂಡ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಾಲಾ ಆವರಣದಲ್ಲಿ ಸೇರಿದಂತೆ ಶಾಲಾ ಮೇಲ್ಚಾವಣಿ ಮೇಲೆ ಮಂಗಗಳು ಓಡಾಡಿ ಹಾನಿ ಮಾಡುತ್ತಿದ್ದು, ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತು ಮಂಗಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸುತ್ತಿದ್ದಾರೆ.