ಬೆಂಗಳೂರು: ಆರ್ಕಿಟೆಕ್ಚರ್ ಕೋರ್ಸ್ಗೆ (Architecture Course) ಎರಡನೇ ಪಿಯುಸಿಯ ಅರ್ಹತಾ ಅಂಕಗಳನ್ನು ಶೇ.50 ರಿಂದ ಶೇ.45 ರಷ್ಟು ಅಂಕಗಳಿಗೆ ಇಳಿಸಿರುವ ಕಾರಣ ಆ ಕೋರ್ಸ್ಗೆ ಸೇರಬಯಸುವ ಅರ್ಹರಿಗೆ ಯುಜಿಸಿಇಟಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇದೇ ಜು.13 ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅವಕಾಶ ಕಲ್ಪಿಸಿದೆ.
Gud News: ಫಲಾನುಭವಿಗಳಿಗೆ ಸರ್ಕಾದಿಂದ ಗುಡ್ ನ್ಯೂಸ್: ಹೊಸ BPL ಕಾರ್ಡ್ ಪಡೆಯಲು ಅರ್ಜಿ ಆಹ್ವಾನ
ಕೌನ್ಸಿಲ್ ಆಫ್ ಆರ್ಕಿಟೆಕ್ಚರ್, ಇತ್ತೀಚೆಗೆ ಪತ್ರ ಬರೆದು ಅರ್ಹತಾ ಅಂಕಗಳನ್ನು ಕಡಿಮೆ ಮಾಡಿದ್ದು, ಆ ಕಾರಣಕ್ಕೆ ದ್ವಿತೀಯ ಪಿಯುಸಿಯಲ್ಲಿ ಶೇ.45 ರಷ್ಟು ಅಂಕ ಪಡೆದು, ನಾಟಾ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಅರ್ಜಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
BPL ಕಾರ್ಡ್ ಇದ್ದ ಕುಟುಂಬದ ಮಕ್ಕಳಿಗೆ ರತನ್ ಟಾಟಾ ಕಡೆಯಿಂದ ಗುಡ್ ನ್ಯೂಸ್ !
ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜು.15 ರೊಳಗೆ ನಾಟಾ ಅಂಕಗಳ ವಿವರ ಮತ್ತು ಅರ್ಜಿ ಪ್ರತಿಯನ್ನು ಕೆಇಎಗೆ ಸಲ್ಲಿಸಬೇಕು. ಜು.8 ರೊಳಗೆ ನಾಟಾ ಅರ್ಹತೆ ಪಡೆದವರು ಕೂಡ ಈ ದಿನಾಂಕದೊಳಗೆ ಅಂಕಗಳ ಮಾಹಿತಿಯನ್ನು ನೀಡಬೇಕು ಎಂದು ಅವರು ವಿವರಿಸಿದ್ದಾರೆ.