ಧಾರವಾಡ:- ವಿದ್ಯಾಕಾಶಿ ಧಾರವಾಡದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, 15 ಹಾಸ್ಟೆಲ್ಗಳ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿದೆ.
BPL Card: ಬಿಪಿಎಲ್ ಹೊಂದಿರುವವರಿಗೆ ಬಿಗ್ ಶಾಕ್: ಕಾರ್ಡ್ ರದ್ದಾದರೆ ಪಡೆಯೋದು ಹೇಗೆ!?
ಹತ್ತನೇ ತರಗತಿಯಿಂದ ಹಿಡಿದು ಪಿಯು ಸೇರಿ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅದರಂತೆ ಅವರಿಗೆ ತಕ್ಕಂತೆ ಬೇಕಾದ ಹಾಸ್ಟೆಲ್ ವ್ಯವಸ್ಥೆ ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಆದ್ರೆ, ಇದೀಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅದರಂತೆ ಧಾರವಾಡಕ್ಕೆ ಒಟ್ಟು 15 ಹಾಸ್ಟೆಲ್ಗಳನ್ನ ನಿರ್ಮಾಣ ಮಾಡುವಂತೆ ಆದೇಶ ಮಾಡಿದೆ.
ಹಾಸ್ಟೆಲ್ ನಿರ್ಮಾಣಕ್ಕೆ ಸಮಯ ತೆಗೆದುಕೊಂಡಿದ್ದು, ಅಲ್ಲಿಯವರೆಗೆ ಬಾಡಿಗೆ ಕಟ್ಟಡಗಳನ್ನು ಪಡೆದು ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದ್ದಾರೆ. ಈಗಾಗಲೇ ಧಾರವಾಡ ನಗರಕ್ಕೆ ಮಾತ್ರ 15 ಹಾಸ್ಟೆಲ್ಗಳು ಸಿಕ್ಕಿದ್ದು, ಅದರಲ್ಲಿ 7 ವಿದ್ಯಾರ್ಥಿನಿಯರು, 6 ವಿದ್ಯಾರ್ಥಿಗಳ ಹಾಸ್ಟೆಲ್ಗಳನ್ನ ಸರ್ಕಾರ ಮಂಜೂರು ಮಾಡಿದೆ. ಈಗಾಗಲೇ ಸ್ಥಳ ಹುಡುಕುವ ಕಾರ್ಯ ಮಾಡಲಾಗಿದ್ದು, ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.
ಪ್ರತಿ ವರ್ಷ 30 ರಿಂದ 40 ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್ಗೆ ಅರ್ಜಿ ಸಲ್ಲಿಸುತ್ತಾರೆ. ಆದ್ರೆ, ಅದರಲ್ಲಿ ಹಾಸ್ಟೆಲ್ ಸಿಗುವುದು ಕೇವಲ 8 ರಿಂದ 10 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಅಳಲು ತೋಡಿಕೊಂಡಿದ್ದಾರೆ. ಶೀಘ್ರದಲ್ಲೇ ಹಾಸ್ಟೆಲ್ಗಳನ್ನ ನಿರ್ಮಿಸಿ ವಿದ್ಯಾರ್ಥಿಗಳ ನೋವಿಗೆ ಸರ್ಕಾರ ಸ್ಪಂದಿಸಬೇಕು ಎನ್ನುವುದೇ ವಿದ್ಯಾರ್ಥಿಗಳ ದೊಡ್ಡ ಬೇಡಿಕೆಯಾಗಿದೆ. ಒಟ್ಟಾರೆ ಧಾರವಾಡ ನಗರಕ್ಕೆ 15 ಹಾಸ್ಟೆಲ್ಗಳು ಬಂದಿದ್ದು ನಿಜಕ್ಕೂ ಖುಷಿಯ ಸಂಗತಿ.