ಬೆಂಗಳೂರು:- ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್ನನ್ನು ಕರೆದೊಯ್ದಿದ್ದ ಇಡಿ ಅಧಿಕಾರಿಗಳು, ಇದೀಗ ವಿಚಾರಣೆ ನಡೆಸಿ ಹರೀಶ್ನನ್ನು ವಾಪಸ್ ಕಳಿಸಿದ್ದಾರೆ.
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಹವಾಲಾ ಹಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್ನನ್ನು ಕರೆದೊಯ್ದಿದ್ದ ಇಡಿ ಅಧಿಕಾರಿಗಳು, ಇದೀಗ ವಿಚಾರಣೆ ನಡೆಸಿ ಹರೀಶ್ನನ್ನು ವಾಪಸ್ ಕಳಿಸಿದ್ದಾರೆ.
ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು, ನಾಗೇಂದ್ರ ಪಿಎ ಆಗಿರುವ ಹರೀಶ್ನನ್ನು ಮಾಧ್ಯಮಗಳ ಗಮನಕ್ಕೆ ಬಾರದಂತೆ ಕರೆದೊಯ್ದಿದ್ದರು. ಸತತ 7 ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ