ಬೆಂಗಳೂರು:- ರಾಜ್ಯದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 293 ಕೇಸ್ ದೃಢವಾಗಿದೆ.
ಶೀಘ್ರವೇ 2 ಸಾವಿರ ಲೈನ್ಮೆನ್ಗಳ ನೇಮಕಕ್ಕೆ ಅಧಿಸೂಚನೆ; ಸಚಿವ ಕೆ.ಜೆ. ಜಾರ್ಜ್ !
ಕಳೆದ 24 ಗಂಟೆಯಲ್ಲಿ 1874 ಮಂದಿ ಡೆಸ್ಟ್ ನಡೆಸಲಾಗಿದ್ದು, ಈ ಪೈಕಿ 293 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. ಇದರಲ್ಲಿ 1 ವರ್ಷದೊಳಗಿನ 2, 1 ರಿಂದ 18 ವರ್ಷದೊಳಗಿನ 101, 18 ವರ್ಷ ಮೇಲ್ಪಟ್ಟವರು 190 ಮಂದಿ ಇದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಸಾವಿನ ಪ್ರಮಾಣ (CFR) ಶೇ.0.08 ಇದೆ. ಸದ್ಯ 100 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಇನ್ನು ರಾಜ್ಯದಲ್ಲಿ ಜನವರಿಯಿಂದ ಈವರೆಗೆ ಒಟ್ಟು 7840 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ